Defence Minister Nirmala Sitharaman hugs an injured victim of militant attack at Sunjwan Army camp, in military hospital in Jammu on Feb 12th. About 6 soldiers martyred till today in Jammu and Kashmir since 3 days.
"ನಾನೊಬ್ಬ ಅಪರಿಚಿತನಿಗಾಗಿ ಪ್ರಾಣ ಬಿಟ್ಟಿದ್ದೇನೆ. ಆ ಅಪರಿಚಿತ ಬೇರಾರೂ ಅಲ್ಲ, ನೀನೇ..." ಸೈನಿಕನೊಬ್ಬನ ಸಮಾಧಿಯ ಮೇಲೆ ಬರೆದಿದ್ದ ಸಾಲಂತೆ ಇದು! ಕ್ಷಣಕಾಲ ಎದೆ ಝಲ್ಲೆನ್ನಿಸುವ ಸಾಲು. ನಮಗಾಗಿ, ನಮಗೆ ಪರಿಚಯವೇ ಇಲ್ಲದ ವ್ಯಕ್ತಿಯೊಬ್ಬ ಯಾಕೆ ಸಾಯಬೇಕು? ಸೈನಿಕರ ಬದುಕಿನ ಪುಟಗಳನ್ನೊಮ್ಮೆ ಇಣುಕಿದರೆ ನಾವೆಷ್ಟು ಜನರ ಋಣದಲ್ಲಿ ಬದುಕುತ್ತಿದ್ದೇವೆ ಎಂದು ಪಶ್ಚಾತ್ತಾಪವಾಗುತ್ತೆ... ಕಳೆದ ಮೂರು ದಿನಗಳಿಂದ ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕರನ್ನು ಬಲಿಹಾಕುವುದಕ್ಕೆ ನಮ್ಮ ಸೈನಿಕರು ನಿರಂತರವಾಗಿ ಗುಂಡಿನ ದಾಳಿ ನಡೆಸುತ್ತಲೇ ಇದ್ದಾರೆ. ಈಗಾಗಲೇ ಆರು ಸೈನಿಕರು ಹುತಾತ್ಮರಾಗಿದ್ದಾರೆ.