Congress president Rahul Gandhi has formed a steering committee that will function instead of the Congress Working Committee for the forthcoming plenary session, the party announced today.
ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಮೇಲುಸ್ತುವಾರಿಗೆ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಹೊಸ ಸಮಿತಿ ನೇಮಿಸಿದ್ದಾರೆ. ಇದಕ್ಕೆ ಕಾಂಗ್ರೆಸ್ ಸ್ಟೀರಿಂಗ್ ಕಮಿಟಿ ಎಂದು ಹೆಸರಿಡಲಾಗಿದೆ. ಮುಂದಿನ ಅಧಿವೇಶನದ ಸಂದರ್ಭದಲ್ಲಿ ಈ ಹಿಂದಿದ್ದ ಕಾಂಗ್ರೆಸ್ ಕಾರ್ಯಕಾರಿ ಸಮಿತಿಗೆ ಪರ್ಯಾಯವಾಗಿ ಈ ಸಮಿತಿ ಕೆಲಸ ಮಾಡಲಿದೆ. 34 ಜನರ ಸ್ಟೀರಿಂಗ್ ಸಮಿತಿಯಲ್ಲಿ ಪಕ್ಷಾಧ್ಯಕ್ಷ ರಾಹುಲ್ ಗಾಂಧಿ, ಅವರ ತಾಯಿ ಸೋನಿಯಾ ಗಾಂಧಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಪಕ್ಷದ ಪ್ರಧಾನ ಕಾರ್ಯದರ್ಶಿಗಳಿದ್ದಾರೆ. ಇವರೆಲ್ಲಾ ನಾಳೆ ಅಂದರೆ ಫೆಬ್ರವರಿ 17ರಂದು ಸಭೆ ನಡೆಸಲಿದ್ದಾರೆ.