ಬೂತ್ ಮಟ್ಟದಲ್ಲಿ ಶ್ರಮವಹಿಸಿದರೆನೇ ಪಕ್ಷಕ್ಕೆ ಬಲಬರುವುದು ಎನ್ನುವ ಪಾಲಿಸಿಯನ್ನೇ ನಂಬಿಕೊಂಡು ಬಂದಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ಎರಡು ದಿನಗಳ ಕರ್ನಾಟಕ ಪ್ರವಾಸದ ವೇಳಾಪಟ್ಟಿಯಲ್ಲಿ ಗಮನಿಸಿಸಬೇಕಾಗಿರುವುದು ಸೋಮವಾರ (ಮಾ 26) ಅವರಿಗೆ ರಾತ್ರಿ ಭೋಜನ ಆಯೋಜನೆಯಾಗಿರುವ ಸ್ಥಳ. ಪಕ್ಷದ ಹಿರಿಯ ಮುಖಂಡ ಕೆ ಎಸ್ ಈಶ್ವರಪ್ಪನವರ ಮನೆಯಲ್ಲಿ ಅಮಿತ್ ಶಾ ಅವರಿಗೆ ಡಿನ್ನರ್ ಆಯೋಜಿಸಲಾಗಿದೆ. ಈಶ್ವರಪ್ಪನವರ ಮನೆಯಲ್ಲಿ ಡಿನ್ನರ್ ವೇಳೆ ನೀವು ಇರಲೇ ಬೇಕು ಎನ್ನುವ ಸೂಚನೆಯನ್ನು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರಿಗೆ ಶಾ ನೀಡಿದ್ದಾರೆ ಎನ್ನುವ ಮಾಹಿತಿಯಿದೆ.
Dinner party organized for BJP National President Amit Shah at Senior BJP Leader KS Eshwarappa residence in Shivamogga during his 2days Karnataka visit on March 26. Due to difference between Yeddyurappa and Eshwarappa, Amit Shah dinner party at Eshwarappa residence