ಮಂಡ್ಯ ಜಿಲ್ಲೆ ನಾಗಮಂಗಲ ಕ್ಷೇತ್ರದ ಚುನಾವಣೆಯಲ್ಲಿ ಈ ಬಾರಿ ಒಂದು ವಿಶೇಷತೆಯಿದೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಅಭ್ಯರ್ಥಿಯಾಗಿದ್ದವರು, ಈ ಬಾರಿಯ ಚುನಾವಣೆಯಲ್ಲಿ ಅದಲು ಬದಲಾಗಿದ್ದಾರೆ. ಏಳು ಜೆಡಿಎಸ್ ಬಂಡಾಯ ನಾಯಕರಲ್ಲಿ ಒಬ್ಬರಾದ ಎನ್ ಚೆಲುವರಾಯಸ್ವಾಮಿ ನಾಲ್ಕು ಬಾರಿ 'ತೆನೆಹೊತ್ತ ಮಹಿಳೆಯ' ಚಿಹ್ನೆಯಡಿ ಸ್ಪರ್ಧಿಸಿ ಅದರಲ್ಲಿ ಮೂರು ಬಾರಿ ಗೆದ್ದಿದ್ದರು. ಕುಮಾರಸ್ವಾಮಿಯವರ ಜೊತೆಗಿನ ಭಿನ್ನಮತದಿಂದ ಪಕ್ಷದಿಂದ ಹೊರನಡೆದ ಚೆಲುವರಾಯಸ್ವಾಮಿಗೆ, ಜೆಡಿಎಸ್ ಅಭ್ಯರ್ಥಿ ಸುರೇಶ್ ಗೌಡ ಈ ಬಾರಿ ಪ್ರತಿಸ್ಪರ್ಧಿ.