ವಿಧಾನಸಭಾ ಚುನಾವಣೆ ಸಮೀಪಿಸುತ್ತರುವ ಈ ಸಂದರ್ಭದಲ್ಲಿ ಬೆಂಗಳೂರು ನಗರದಲ್ಲಾಗಬೇಕಿರುವ ಬದಲಾವಣೆ , ಅಭಿವೃದ್ಧಿಯ ಬಗ್ಗೆ ರಾಜಧಾನಿಯ ನಿವಾಸಿಗಳನ್ನು ಒನ್ ಇಂಡಿಯಾ ಕನ್ನಡ ತಂಡಕ್ಕೆ ಮಾತಿಗೆ ಸಿಕ್ಕ ನಿವೃತ್ತ ಹಿರಿಯ ನಾಗರಿಕಒಬ್ಬರು ದೇಶದಲ್ಲಿ ಅದರಲ್ಲೂ ಕರ್ನಾಟಕದಲ್ಲಿ ಹಿರಿಯ ನಾಗರಿಕರನ್ನು ಕಡೆಗಣಿಸುತ್ತಿರುವುದರ ಬಗ್ಗೆ ಬೇಸರ ವ್ಯಕ್ತಪಡಿಸಿದರು . ಮಕ್ಕಳು ತಮ್ಮ ಪೋಷಕರಿಗೆ ಮಾಡುವ ಅವಮಾನಗಳಿಗೆ ಸಂಬಂಧಿಸಿದಂತೆ ಸರ್ಕಾರ ಏನೇ ಕಾನೂನು ತಂದರು ಅದು ಅನುಷ್ಠಾನಗೊಳ್ಳುವುದರಲ್ಲಿ ವಿಫಲವಾಗುತ್ತಿರುವುದನ್ನು ಹಿರಿಯ ನಾಗರಿಕರ ಪರವಾಗಿ ಖಂಡಿಸಿದರು .ಅಲ್ಲದೆ ರೈತ , ಕಾರ್ಮಿಕ ಇವರ ಏಳಿಗೆಯಾದರಷ್ಟೇ ದೇಶದ ಏಳಿಗೆ ಆದ್ದರಿಂದ ಯಾವುದೇ ಸರ್ಕಾರ ಬಂದರು ರೈತರನ್ನು ಕಡೆಗಣಿಸಬಾರದು .