ವಿಧಾನಸಭಾ ಚುನಾವಣೆ ಸಮೀಪಿಸುತ್ತರುವ ಈ ಸಂದರ್ಭದಲ್ಲಿ ಬೆಂಗಳೂರು
ನಗರದಲ್ಲಾಗಬೇಕಿರುವ ಬದಲಾವಣೆ , ಅಭಿವೃದ್ಧಿಯ ಬಗ್ಗೆ ರಾಜಧಾನಿಯ ನಿವಾಸಿಗಳನ್ನು ಒನ್ ಇಂಡಿಯಾ ಕನ್ನಡ ತಂಡ ಮಾತನಾಡಿಸಿತು . ಬೆಂಗಳೂರಿನಲ್ಲಿ ಅನೇಕ ಸಮಸ್ಯೆಗಳಿದ್ದು ಅದರಲ್ಲಿ ಮುಖ್ಯವಾಗಿ ವಾಯುಮಾಲಿನ್ಯ ಅಧಿಕವಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ . ಮಾಲಿನ್ಯ ನಿಯಂತ್ರಣಕ್ಕೆ ಸರ್ಕಾರಗಳು ಸೂಕ್ತ ರೀತಿಯಲ್ಲಿ ಪರಿಹಾರ ಕಂಡುಕೊಳ್ಳಬೇಕು . ಇದಕ್ಕೆ ನಾಗರಿಕರಾದ ನಮ್ಮದು ಕರ್ತವ್ಯವೆಂಬುದು ಮರೆಯಬಾರದು . ಗಾರ್ಡನ್ ಸಿಟಿ ಬರೀ ಹೆಸರಿಗೆ ಮಾತ್ರವಲ್ಲದೆ ನಿಜವಾಗಲೂ ಹಸಿರಿನ ಪ್ರದೇಶವಾಗಿ ಇರಿಸಿಕೊಳ್ಳುವುದು ನಮ್ಮೆಲ್ಲ ಮೊದಲ ಆದ್ಯತೆಯಾಗಬೇಕು