Bigg Boss Kannada Season 5 winner, Olle Hudga Pratham spoke about CM Kumaraswamy. Pratham confidently says that H D Kumaraswamy will waive the Farmers loan
ಮುಖ್ಯಮಂತ್ರಿ ಕುಮಾರ ಸ್ವಾಮಿ ತಾವು ಅಧಿಕಾರ ಸ್ವೀಕಾರ ಮಾಡಿದ 24 ಗಂಟೆಗಳಲ್ಲಿ ಸಾಲಮನ್ನಾ ಮಾಡುತ್ತೇನೆ ಎಂದು ಹೇಳಿದ್ದರು. ಆದರೆ ಈಗ ಅದೇ ದೊಡ್ಡ ಚರ್ಚೆಗೆ ಕಾರಣ ಆಗಿದೆ. ರಾಂಗ್ ರೂಟ್' ಎಂಬ ಸಿನಿಮಾದ ಆಡಿಯೋ ಬಿಡುಗಡೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಪ್ರಥಮ್ ಮುಖ್ಯಮಂತ್ರಿ ಕುಮಾರಸ್ವಾಮಿ ಪರ ಮಾತನಾಡಿದ್ದಾರೆ. ''ಕುಮಾರಸ್ವಾಮಿ ಅವರು ಅಧಿಕಾರ ಸ್ವೀಕರಿಸಿ ಒಂದು ವಾರಗಳು ಕಳೆದಿವೆ. ಅವರಿಗೆ ಸ್ವಲ್ಪ ಸಮಯ ಅವಕಾಶ ಕೊಡಿ. ಖಂಡಿತ ಸಾಲಮನ್ನಾ ಮಾಡ್ತಾರೆ. ಎಲ್ಲದಕ್ಕೂ ಸಮಯ ಬೇಕಾಗುತ್ತದೆ.'' ಎಂದು ಪ್ರಥಮ್ ಹೇಳಿದ್ದಾರೆ.