Heavy rain lashes in Mysuru district since from 2 days. roads look like river. due to rain many trees were uprooted.
ಮೈಸೂರಿನ ರಸ್ತೆಗಳ ಮೇಲೆ ಎತ್ತ ನೋಡಿದರತ್ತ ನೀರು..ನೀರು..ನೀರು. ರಸ್ತೆ ಯಾವುದು, ಫುಟ್ಪಾತ್ ಯಾವುದು, ಎಲ್ಲಿ ಹಳ್ಳ ಇದೆ, ಎಲ್ಲಿ ಮ್ಯಾನ್ ಹೋಲ್ ಬಾಯಿ ತೆರೆದಿರಬಹುದು ಎಂಬುದಾವುದೂ ಅರಿವಿಗೆ ಬಾರದಂತಹ ಸ್ಥಿತಿಯಲ್ಲಿ ಕುರುಡು ಕುರುಡಾಗಿ ವಾಹನ ಚಲಾಯಿಸುವಂತೆ ಮಾಡಿದ, ಎತ್ತ ಕಾಲು ಹಾಕಿದರೆ ಏನಾದೀತೊ ಎಂದು ಪಾದಚಾರಿಗಳು ಭಯಪಡುವಂತೆ ಮಾಡಿ ಬಿಟ್ಟಿದೆ ಈ ಭಾರಿ ಮಳೆ.