Karnataka Chief Minister HD Kumaraswamy facing testing time coalition government, said JDS Supremo Deve Gowda. In Pavagada (Tumakuru district) HDD said, we never went Congress door-step for power, even we offered CM post to them.
ಅತಂತ್ರ ಫಲಿತಾಂಶ ಹೊರಬೀಳುತ್ತಿದ್ದಂತೇ ಜೆಡಿಎಸ್ ವರಿಷ್ಠ ದೇವೇಗೌಡ್ರ ಮನೆಬಾಗಿಲಿಗೆ ಓಡೋಡಿ ಬಂದಿದ್ದ ಕಾಂಗ್ರೆಸ್ಸಿನ ಮೇಲೆ, ಅಂದು ಗೌಡರಿಗಿದ್ದ ಅಚಲ ವಿಶ್ವಾಸ ದಿನದಿಂದ ದಿನಕ್ಕೆ ಕರಗುತ್ತಿದೆಯೇ? ಕಳೆದೆರಡು ದಿನಗಳಿಂದ ಗೌಡ್ರು ನೀಡುತ್ತಿರುವ ಹೇಳಿಕೆ, ಇದಕ್ಕೆ ಪುಷ್ಠಿ ನೀಡುವಂತಿದೆ.. ನನ್ನ ಮಗನನ್ನು ಮುಖ್ಯಮಂತ್ರಿ ಮಾಡಿದ್ದು ರಾಜ್ಯದ ಮಹಾಜನತೆಯಲ್ಲ, ಕಾಂಗ್ರೆಸ್ ಎಂದು ಪದೇಪದೇ ಹೇಳುತ್ತಿದ್ದ ದೇವೇಗೌಡ್ರು, ಅದ್ಯಾಕೋ ಸಮ್ಮಿಶ್ರ ಸರಕಾರದ ಆಯಸ್ಸಿನ ಬಗ್ಗೆ ಸಂಶಯದ ಮಾತನ್ನಾಡುತ್ತಿದ್ದಾರೆ.