I will stand with my Kuruba community, Kaginele Mutt Seer Sri Sri Sri Niranjanananda Puri Swamiji counter attack to JDS MLA from Hunsur H Vishwanath. Seer said, earlier in the coalition government they sidelined former CM Siddaramaiah, now they are transferring Kuruba officials.
ಹಿಂದೂಗಳಲ್ಲಿ ಒಗ್ಗಟ್ಟನ್ನು ಮೂಡಿಸಿ, ಧರ್ಮ ಪ್ರಚಾರದಲ್ಲಿ ತೊಡಬೇಕಾಗಿರುವ ನಾಡಿನ ಕೆಲವು ಪೀಠಾಧಿಪತಿಗಳ ರಾಜಕೀಯ ಹಸ್ತಕ್ಷೇಪ ಮುಂದುವರಿಯುತ್ತಲೇ ಇದೆ. ಅವರವರ ಸಮುದಾಯದ ರಾಜಕೀಯ ಮುಖಂಡರ ಪರವಾಗಿ ನಿಂತು, ಜಾತಿ ರಾಜಕಾರಣ ಕಾವಿತೊಟ್ಟ ಸನ್ಯಾಸಿಗಳಿಂದ ಆಗುತ್ತಿರುವುದು ವಿಷಾದನೀಯ. ಲಿಂಗಾಯತ, ಒಕ್ಕಲಿಗರ ಪೀಠಾಧಿಪತಿಗಳ ನಂತರ ಕುರುಬ ಸಮುದಾಯದ ನಿರಂಜನನಾನಂದಪುರಿ ಶ್ರೀಗಳು ಮತ್ತು ಅದೇ ಸಮುದಾಯದ ಹುಣಸೂರು ಜೆಡಿಎಸ್ ಶಾಸಕ ಎಚ್ ವಿಶ್ವನಾಥ್ ನಡುವೆ ಅಧಿಕಾರಿಗಳ ವರ್ಗಾವಣೆ ಸಂಬಂಧ ವಾಕ್ಸಮರ ಮುಂದುವರಿದಿದೆ. ಹರಿಹರ ಬ್ರಹ್ಮರೇ ಬರಲಿ ಡೋಂಟ್ ಕೇರ್ ಎಂದಿದ್ದಾರೆ ಕಾಗಿನೆಲೆ ಶ್ರೀಗಳು.