Delhi's Ramleela Maidan may be renamed to honour former prime minister Atal Bihari Vajpayee.
ದೆಹಲಿಯ ಪ್ರಸಿದ್ಧ ರಾಮಲೀಲಾ ಮೈದಾನಕ್ಕೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಹೆಸರಿಡುವ ಬಗ್ಗೆ ಚಿಂತನೆ ನಡೆಯುತ್ತಿದೆ. ಉತ್ತರ ದೆಹಲಿ ಮುನ್ಸಿಪಲ್ ಕಾರ್ಪೋರೇಶನ್ ಈ ಪ್ರಸ್ತಾಪವನ್ನು ದೆಹಲಿ ಸರ್ಕಾರದ ಮುಂದಿಟ್ಟಿದೆ. ದೆಹಲಿಯ ಪ್ರಸಿದ್ಧ ಸ್ಥಳಗಳಲ್ಲಿ ರಾಮಲೀಲಾ ಮೈದಾನವೂ ಒಂದು. ಆದ್ದರಿಂದ ಈ ಮೈದಾನಕ್ಕೆ ಅಟಲ್ ಬಿಹಾರಿ ವಾಜಪೇಯಿ ಅವರ ಹೆಸರನ್ನಿಟ್ಟು ಅವರಿಗೆ ಗೌರವ ಸೂಚಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ.