After Rajajinagar BJP MLA Suresh Kumar mocking Karnataka CM HD Kumaraswamy's wife and newly appointed JDS MLA from Ramanagara constituency Anitha Kumaraswamy, Many twitterians react to his tweet.
ಶಾಸಕಿಯಾಗಿ ಇತ್ತೀಚೆಗಷ್ಟೇ ಪ್ರಮಾಣವಚನ ಸ್ವೀಕರಿಸಿದ ಅನಿತಾ ಕುಮಾರಸ್ವಾಮಿ ಅವರ ಮೇಲೆ ಬಿಜೆಪಿ ಶಾಸಕ ಸುರೇಶ್ ಕುಮಾರ್ ಅವರು ಟೀಕಾಸ್ತ್ರ ಪ್ರಯೋಗಿಸಿದ್ದನ್ನು ಓದಿದ್ದೇವೆ. ರಾಮನಗರ ಕ್ಷೇತ್ರದ ಜೆಡಿಎಸ್ ಶಾಸಕಿಯಾಗಿ ಉಪಚುನಾವಣೆಯಲ್ಲಿ ಗೆದ್ದ ಅನಿತಾ ಕುಮಾರಸ್ವಾಮಿ, ಗುರುವಾರ ಪ್ರಮಾಣವಚನ ಸ್ವೀಕರಿಸಿದರು. ಪ್ರಮಾಣ ವಚನ ಸ್ವೀಕರಿಸಿದ ನಂತರ ಪತ್ರಕರ್ತರೊಂದಿಗೆ ಮಾತನಾಡುತ್ತ, ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ಸಚಿವ ಸ್ಥಾನಕ್ಕಾಗಿ ಯಾವುದೇ ಲಾಬಿ ಮಾಡುವುದಿಲ್ಲ. ಆದರೆ ಸಚಿವ ಸ್ಥಾನ ನೀಡಿದರೆ ಉತ್ತಮ ಕೆಲಸ ಮಾಡುತ್ತೇನೆ" ಎಂದಿದ್ದರು. ಅದಕ್ಕೆ ಪ್ರತಿಕ್ರಿಯೆ ನೀಡಿದ್ದ ಸುರೇಶ್ ಕುಮಾರ್, ಪರೋಕ್ಷವಾಗಿ ಸಚಿವ ಸ್ಥಾನದ ಇಂಗಿತ ವ್ಯಕ್ತಪಡಿಸಿದ ಅನಿತಾ ಕುಮಾರಸ್ವಾಮಿ ಅವರನ್ನು ಆಡಿಕೊಂಡಿದ್ದರು. ಅವರ ಟ್ವೀಟ್ ಗೆ ಪರ ವಿರೋಧದ ಪ್ರತಿಕ್ರಿಯೆ ಹೊರಬಂದಿತ್ತು. ಇವತ್ತು ಸಹ ಟ್ವಿಟ್ಟರ್ ನಲ್ಲಿ ಸುರೇಶ್ ಕುಮಾರ್ ಅವರ ಟ್ವೀಟ್ ಗೆ ಪ್ರತಿಕ್ರಿಯೆಯ ಸುರಿಮಳೆ ಸುರಿಯುತ್ತಲೇ ಇದೆ.