After death of veteran actor Dr.Rajkumar, now Ambareesh death. Chief Minister Kumaraswamy facing second tough moment. Ambareesh funeral processing may start at around 1PM (Nov 26) from Kanteerava Stadium to Kanteerava Studio.
ಬೆಂಗಳೂರಿನ ಕಂಠೀರವ ಸ್ಟೇಡಿಯಂ, ಮಂಡ್ಯದ ವಿಶ್ವೇಶ್ವರಯ್ಯ ಮೈದಾನದಲ್ಲಿ, ರೆಬೆಲ್ ಸ್ಟಾರ್ ಅಂಬರೀಶ್ ಅವರ ಅಂತಿಮ ದರ್ಶನ ಪಡೆಯಲು ಬಂದ ಜನಸಾಗರ, ಅಂಬಿ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿಯಂತಿದೆ. ಅಂಬಿ ನಿಧನದಿಂದ, ಕನ್ನಡ ಚಿತ್ರರಂಗ ತನ್ನ ನಾಲ್ಕು ಪ್ರಮುಖ ಕೊಂಡಿಗಳನ್ನು ಕಳಕೊಂಡಂತಾಗಿದೆ. ಎರಡನೇ ಅವಧಿಗೆ ಮುಖ್ಯಮಂತ್ರಿಯಾಗಿರುವ ಎಚ್ ಡಿ ಕುಮಾರಸ್ವಾಮಿಯವರು, ತಮ್ಮ ಸಿಎಂ ಅವಧಿಯಲ್ಲಿ ಎದುರಿಸುತ್ತಿರುವ ಎರಡನೇ ಕಠಿಣವಾದ ಸವಾಲಿದು ಎಂದರೆ ತಪ್ಪಾಗಲಾರದು. ಮೊದಲನೇ ಬಾರಿಗೆ ಎಚ್ಡಿಕೆ ಮುಖ್ಯಮಂತ್ರಿಯಾಗಿದ್ದಾಗ ವರನಟ ಡಾ. ರಾಜಕುಮಾರ್ ನಿಧನರಾಗಿದ್ದರು, ಈಗ ಅಂಬರೀಶ್.