ಯಜಮಾನ' ಚಿತ್ರ ಎಲ್ಲ ರೀತಿಯ ಮನರಂಜನೆಯ ಅಂಶಗಳ ಮಿಶ್ರಣ. ಬೆಳೆ ಬೆಳೆದ ರೈತನೇ ನಿಜವಾದ 'ಯಜಮಾನ' ಎಂದು ಹೇಳುವ ಈ ಸಿನಿಮಾ ಕೆಲ ಸೂಕ್ಷ್ಮ ವಿಷಯಗಳನ್ನು ಕಮರ್ಶಿಯಲ್ ಶೈಲಿಯಲ್ಲಿ ಹೇಳಿದೆ. ಮಜಾ ನೀಡೋ ಹಾಡು, ಥ್ರಿಲ್ ನೀಡುವ ಫೈಟುಗಳ ಜೊತೆಜೊತೆಗೆ ಫ್ಯಾಮಿಲಿ ಹಾಗೂ ಊರಿನ ಕಥೆ ಇರುವ 'ಯಜಮಾನ' ದರ್ಶನ್ ಅಭಿಮಾನಿಗಳಿಗೆ ಮೋಸ ಮಾಡುವುದಿಲ್ಲ.