ನಟ ದರ್ಶನ್ ಅವರು ಇತ್ತೀಚಿನ ದಿನಗಳಲ್ಲಿ ಹೆಚ್ಚು ಹೆಚ್ಚು ಹೊಸ ಕಲಾವಿದರ ಚಿತ್ರಗಳನ್ನ ಬೆಂಬಲಿಸುತ್ತಿದ್ದಾರೆ. ಬರಿ ಚಿತ್ರರಂಗದಲ್ಲಿ ಮಾತ್ರವಲ್ಲದೇ ಯುವಕರಿಗೆ ಸ್ಫೂರ್ತಿಯಾಗುವಂತಹ ಕೆಲಸಗಳಲ್ಲಿ ಕೂಡ ತೊಡಗಿಕೊಳ್ತಿದ್ದಾರೆ. ಹುಟ್ಟುಹಬ್ಬದ ದಿನ ದವಸ ಧಾನ್ಯಗಳನ್ನ ಸಂಗ್ರಹಿಸಿ ಅನಾಥಾಶ್ರಮಗಳಿಗೆ ಹಂಚಿದರು. ಕರ್ನಾಟಕ ಅರಣ್ಯ ಇಲಾಖೆಯ ರಾಯಭಾರಿಯಾಗಿರುವ ದರ್ಶನ್, ಗಿಡಗಳನ್ನ ನೆಡಿ, ಅರಣ್ಯ ಉಳಿಸಿ ಅಭಿಯಾನಕ್ಕೆ ಚಾಲನೆ ನೀಡಿದ್ರು. ಹೀಗೆ, ಸಮಾಜಕ್ಕೆ ಒಳ್ಳೆಯ ಸಂದೇಶಗಳನ್ನ ಕೊಡ್ತಿರುವ ದಾಸ, ಹಂಪಿ ಉತ್ಸವದಲ್ಲಿ ಲವರ್ಸ್ ಗೆ ಒಂದು ವಿಶೇಷವಾದ ಕಿವಿ ಮಾತನ್ನ ಹೇಳಿದ್ದಾರೆ.
Challenging star darshan has gave most important suggestion to lovers in hampi utsav 2019. he was chief guest in hampi utsav 2019.