ಲೋಕಸಭೆ ಚುನಾವಣೆ ಸಮರದಲ್ಲಿ ಈ ಬಾರಿ ಬಂದಿರುವ ಚುನಾವಣಾ ಪೂರ್ವ ಸಮೀಕ್ಷೆಗಳಲ್ಲಿ ಬಹುತೇಕ ಎನ್ಡಿಎ ಮುಂದಿದೆ. ಆದರೆ, ಬಿಜೆಪಿ ಮ್ಯಾಜಿಕ್ ನಂಬರ್ 272 ದಾಟಲು ತಿಣುಕಾಡುತ್ತಿದೆ. ಬಿಜೆಪಿ ಸ್ವಯಂಬಲದಿಂದ ಬಹುಮತ ಗಳಿಸುವುದು ಯಾಕೋ ಕಷ್ಟವೆನಿಸುತ್ತಿದೆ ಎಂದು ರಾಜಕೀಯ ತಜ್ಞ ಡಾ. ಸಂದೀಪ್ ಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ.