ನಮ್ಮ ದಿನ ನಿತ್ಯ ಜೀವನದಲ್ಲಿ ಒಂದು ಸ್ಥಳದಿಂದ ಮತ್ತೊಂದು ಸ್ಥಳವನ್ನು ತಲುಪಲು ಸಾರಿಗೆ ಸಹಾಯವು ಬೇಕೆ ಬೇಕು. ಕೆಲವರು ಕೇವಲ ಕಾಫಿ ಕುಡಿಯಲು ಬೆಂಗಳೂರಿನಿಂದ ರಾಮನಗರದ ವರೆಗು ಪ್ರಯಾಣಿಸುತ್ತಾರೆ. ಆದರೆ ಅದೇ ಒಂದು ಪ್ರಾಣವನ್ನು ಕಾಪಾಡಬೇಕಾದರೆ ಎಷ್ಟು ದೂರ ಬೇಕಾದರೂ ಹೋಗಬೇಕಾಗುತ್ತದೆ ಎನ್ನುವುದಕ್ಕೆ ಈ ಘಟನೆಯೆ ಸಾಕ್ಷಿ.