ಮಂಡ್ಯದ ಮಾಜಿ ಸಂಸದೆ, ಕಾಂಗ್ರೆಸ್ ಪಕ್ಷದ ಸೋಶಿಯಲ್ ಮೀಡಿಯಾ ಮುಖ್ಯಸ್ಥೆ ಹಾಗೂ ಒಂದು ಕಾಲದ ಖ್ಯಾತ ಚಿತ್ರನಟಿ ರಮ್ಯಾ, ರಾಜ್ಯ ರಾಜಕಾರಣದಿಂದ ದೂರವಾಗಿ ತುಂಬಾ ವರ್ಷ ಆಗಿದೆ. ಕಳೆದ ಬಾರಿ ಮಂಡ್ಯ ಲೋಕಸಭೆ ಅಖಾಡದಲ್ಲಿ ಸೋತಿದ್ದ ರಮ್ಯಾ ಆ ನಂತರ ಮಂಡ್ಯ ಕಡೆ ಅಲ್ಲಾ, ಕರ್ನಾಟಕದಲ್ಲೇ ಕಾಣಿಸಿಕೊಂಡಿದ್ದು ಅಪರೂಪ. ರಮ್ಯಾ ಅವರು ಮಂಡ್ಯದಿಂದ ಬೇರೆ ಕ್ಷೇತ್ರಕ್ಕೆ ಮತದಾನದ ಹಕ್ಕು ಬದಲಾಯಿಸಿಕೊಂಡಿದ್ದಾರೆ. ಹಾಗಾಗಿ, ಅವರು ಮಂಡ್ಯದಲ್ಲಿ ವೋಟ್ ಮಾಡಿಲ್ಲ. ಬೇರೆ ಕ್ಷೇತ್ರದಲ್ಲಿ ವೋಟ್ ಮಾಡಿರಬಹುದು ಅಲ್ವಾ? ಎಂದು ರಮ್ಯಾ ಅವರ ಅಭಿಮಾನಿ ಪ್ರಶ್ನಿಸುತ್ತಿದ್ದಾರೆ.