ಬೆಂಗಳೂರಿನಲ್ಲಿರುವ ನ್ಯಾಷನಲ್ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ) ಮುಖ್ಯಸ್ಥರಾಗಿರುವ ದ್ರಾವಿಡ್, ತಂಡದ ಅಭ್ಯಾಸದ ವೇಳೆ ಭೇಟಿಯಿತ್ತು ಕೋಚ್ ರವಿ ಶಾಸ್ತ್ರಿ ಜೊತೆ ಕೊಂಚ ಮಾತುಕತೆ ನಡೆಸಿದರು. ದ್ರಾವಿಡ್ ಮತ್ತು ಶಾಸ್ತ್ರಿ ಜೊತೆಗಿರುವ ಫೋಟೋವನ್ನು ಬಿಸಿಸಿಐ ಟ್ವೀಟ್ ಮಾಡಿದೆ. ಟ್ವೀಟ್‌ನಲ್ಲಿ 'ಭಾರತದ ಕ್ರಿಕೆಟ್‌ನ ಇಬ್ಬರು ಶ್ರೇಷ್ಠರು ಭೇಟಿಯಾದಾಗ' ಎಂದು ಸಾಲನ್ನು ಸೇರಿಸಲಾಗಿದೆ.