ರವಿ ಬೆಳಗೆರೆ ಅಂದ್ರೆ ವಿವಾದಾತ್ಮಕ ಪತ್ರಕರ್ತ ಎಂಬ ಭಾವ ಹಲವರಲ್ಲಿದೆ. ಸುಪಾರಿ ಕೇಸ್ ನಲ್ಲಿ ತಗಲಾಕಿಕೊಂಡ ಮೇಲಂತೂ ರವಿ ಬೆಳಗೆರೆ ಬಗ್ಗೆ ಮಾಧ್ಯಮಗಳಲ್ಲಿ ತರಹೇವಾರಿ ಸುದ್ದಿಗಳು ಪ್ರಕಟವಾದವು. ವೈವಾಹಿಕ ಜೀವನದ ವಿಚಾರವಾಗಿಯೂ ರವಿ ಬೆಳಗೆರೆ ಸುದ್ದಿಯಾದರು. ಈ ಎಲ್ಲದರ ನಡುವೆ ರವಿ ಬೆಳಗೆರೆಗೆ ಒಳ್ಳೆಯ ಇಮೇಜ್ ತಂದುಕೊಟ್ಟಿದ್ದು 'ಬಿಗ್ ಬಾಸ್' ಕಾರ್ಯಕ್ರಮ. ರವಿ ಬೆಳಗೆರೆ ಭಾವುಕ ಜೀವಿ ಅಂತ ತೋರಿಸಿಕೊಟ್ಟಿದ್ದು ಇದೇ 'ಬಿಗ್ ಬಾಸ್' ಶೋ.