ನಮ್ಮ ಜೀವನದಲ್ಲಿ ನಡೆಯುವ ಘಟನೆಗಳನ್ನು ನಾವು ಊಹಿಸಲು ಸಾಧ್ಯವಿಲ್ಲ ಎನ್ನುವುದು ಎಷ್ಟು ನಿಜವೂ, ನಾನು ಏನು ಬಯಸುತ್ತೇವೆ ಅದರಂತೆ ಜೀವನ ಬದಲಾಗುತ್ತದೆ ಎಂಬುವುದು ಕೂಡ ಅಷ್ಟೇ ನಿಜ. ಹೌದು ಆದ್ದರಿಂದಲೇ ಪಾಸಿಟಿವ್ ಥಿಂಕಿಂಗ್ ಇರಬೇಕು ಅಂದರೆ ಒಳಿತನ್ನೇ ಯೋಚಿಸಬೇಕೆಂದು ಹೇಳುವುದು. ಅಲ್ಲದೆ ನಾವು ಏನು ಯೋಚಿಸುತ್ತೇವೆ ಅದು ನಮ್ಮ ದೇಹದ ಮೇಲೂ ಪರಿಣಾಮ ಬೀರುವುದು. ಇದರಿಂದ ಮನಸ್ಸಿನ ನೆಮ್ಮದಿ ಹಾಳಾಗುವುದು. ನಾವು ಕೆಟ್ಟದ್ದನ್ನುಯೋಚಿಸಿದರೆ ಒಂದೊಂದೇ ಆರೋಗ್ಯ ಸಮಸ್ಯೆ ಶುರುವಾಗುತ್ತದೆ. ಅದೇ ಒಳ್ಳೆಯ ಆಲೋಚನೆ ಇದ್ದರೆ ದೇಹದ ಆರೋಗ್ಯ ಕೂಡ ಚೆನ್ನಾಗಿರುತ್ತದೆ. ಇನ್ನು ಕೆಲವೊಮ್ಮೆ ನಾವು ಏನಾದರೂ ಒಳ್ಳೆಯದು ಯೋಚಿಸಿದರೂ ಬೇರೆಯವರ ನೆಗೆಟಿವ್ ಥಿಂಕಿಂಗ್ ನಿಮ್ಮನ್ನು ಪ್ರಭಾವಿಸಬಹುದು. ಇಲ್ಲಿ ನಾವು ನೆಗೆಟಿವ್ ಎನರ್ಜಿ ದೂರ ಮಾಡಲು ಪವರ್‌ಫುಲ್ ಟಿಪ್ಸ್ ನೀಡಿದ್ದೇವೆ ನೋಡಿ: