ಬಿಎಂಡಬ್ಲ್ಯು 8 ಸೀರಿಸ್ ಗ್ರ್ಯಾನ್ ಕೂಪೆ ಹಾಗೂ ಎಂ 8 ಕೂಪೆ ಕಾರುಗಳನ್ನು ಭಾರತದಲ್ಲಿ ಬಿಡುಗಡೆಗೊಳಿಸಲಾಗಿದೆ

DriveSpark Kannada 2020-05-12

Views 157

ಜರ್ಮನಿ ಮೂಲದ ಐಷಾರಾಮಿ ಕಾರು ತಯಾರಕ ಕಂಪನಿಯಾದ ಬಿಎಂಡಬ್ಲ್ಯು ತನ್ನ 8 ಸೀರಿಸ್ ಗ್ರ್ಯಾನ್ ಕೂಪೆ ಹಾಗೂ ಎಂ8 ಕೂಪೆ ಮಾದರಿಗಳನ್ನು ಭಾರತದಲ್ಲಿ ಬಿಡುಗಡೆಗೊಳಿಸಿದೆ.
ಈ ಕಾರುಗಳ ಆರಂಭಿಕ ಬೆಲೆ ರೂ.1.30 ಕೋಟಿಗಳಾಗಿದ್ದು, ಎಲ್ಲಾ ಬಿಎಂಡಬ್ಲ್ಯು ಡೀಲರ್‌ಶಿಪ್‌ಗಳಲ್ಲಿ ಬುಕ್ಕಿಂಗ್ ಆರಂಭಿಸಲಾಗಿದೆ.
 
ಮೊಟ್ಟಮೊದಲ ಬಿಎಂಡಬ್ಲ್ಯು 8 ಸೀರಿಸ್ ಗ್ರ್ಯಾನ್ ಕೂಪೆ ಯಾವುದರಲ್ಲೂ ರಾಜಿಯಾಗಿಲ್ಲ. ನಾಲ್ಕು ಪ್ರಯಾಣಿಕರ ಈ ಸ್ಪೋರ್ಟ್ಸ್ ಕಾರು ಆಕರ್ಷಕವಾದ ವಿನ್ಯಾಸ,
ಪರ್ಫಾಮೆನ್ಸ್ ಹಾಗೂ ಹೆಚ್ಚು ಇಂಟಿರಿಯರ್ ಸ್ಪೇಸ್ ಅನ್ನು ಹೊಂದಿದೆ. ಇದು ಬಿಎಂಡಬ್ಲ್ಯು ನಿರ್ಮಿಸಿರುವ ಐಷಾರಾಮಿ ಸ್ಪೋರ್ಟ್ಸ್ ಕೂಪೆಯಾಗಿದೆ.

ಬಿಎಂಡಬ್ಲ್ಯು 8 ಸೀರಿಸ್ ಗ್ರ್ಯಾನ್ ಕೂಪೆ ಎರಡು ಹೆಚ್ಚುವರಿ ಡೋರ್‌ಗಳು, ಆಕರ್ಷಕವಾದ ವಿಸ್ತೃತ ವ್ಹೀಲ್‌ಬೇಸ್, ಅಸಾಧಾರಣವಾದ ಚಾಲನಾ ಅನುಭವವನ್ನು ನೀಡುತ್ತದೆ.
ಸ್ಪೋರ್ಟಿಯರ್ ಕಾರು ಬಯಸುವವರು ಎಂ ಸ್ಪೋರ್ಟ್ ಮಾದರಿಯನ್ನು ಖರೀದಿಸಬಹುದು.

Share This Video


Download

  
Report form