ದಟ್ಸನ್ ಇಂಡಿಯಾ 2020ರ ರೆಡಿಗೋ ಫೇಸ್‌ಲಿಫ್ಟ್ ಹ್ಯಾಚ್‌ಬ್ಯಾಕ್ ಕಾರ್ ಅನ್ನು ಶೀಘ್ರದಲ್ಲೇ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದೆ. 2020ರ ಹೊಸ ದಟ್ಸನ್ ರೆಡಿಗೋ ಫೇಸ್‌ಲಿಫ್ಟ್
ಹ್ಯಾಚ್‌ಬ್ಯಾಕ್ ಕಾರಿನ ಟೀಸರ್ ಅನ್ನು ಕೆಲವು ದಿನಗಳ ಹಿಂದೆ ಬಿಡುಗಡೆಗೊಳಿಸಲಾಗಿತ್ತು. ಈ ಟೀಸರ್‌ನಲ್ಲಿ ಎಂಟ್ರಿ ಲೆವೆಲ್ ಕಾರಿನ ಫಸ್ಟ್ ಲುಕ್ ಅನ್ನು ಕಾಣಬಹುದು.
ಇತ್ತೀಚಿನ ವರದಿಗಳ ಪ್ರಕಾರ 2020ರ ದಟ್ಸನ್ ರೆಡಿಗೋ ಫೇಸ್‌ಲಿಫ್ಟ್ ಕಾರ್ ಅನ್ನು ಕಂಪನಿಯ ಮಾರಾಟಗಾರರಿಗೆ ತಲುಪಿಸಲಾಗಿದೆ. ಇದರಿಂದ ಈ ಕಾರು ಶೀಘ್ರದಲ್ಲೇ ಬಿಡುಗಡೆಯಾಗುವುದು ಖಚಿತವಾಗಿದೆ.
2020ರ ರೆಡಿಗೋ ಹ್ಯಾಚ್‌ಬ್ಯಾಕ್ ಕಾರಿನಲ್ಲಿ ಮಾಡಲಾಗಿರುವ ಅಪ್‌ಡೇಟ್, ಮಾದರಿ ಹಾಗೂ ಫೀಚರ್‌ಗಳ ಬಗೆಗಿನ ವಿವರಗಳು ಬಹಿರಂಗವಾಗಿವೆ.
2020ರ ದಟ್ಸನ್ ರೆಡಿಗೋ ಫೇಸ್ ಲಿಫ್ಟ್ ಕಾರ್ ಅನ್ನು ಡಿ, ಎ, ಟಿ ಹಾಗೂ ಟಿ (ಒ) ಎಂಬ ನಾಲ್ಕು ಮಾದರಿಗಳಲ್ಲಿ ಮಾರಾಟ ಮಾಡಲಾಗುವುದು. ಎಲ್ಲಾ ನಾಲ್ಕು ಮಾದರಿಗಳಲ್ಲಿ ಹಲವಾರು ಫೀಚರ್ ಹಾಗೂ
ಎಕ್ವಿಪ್‌ಮೆಂಟ್‌ಗಳಿರಲಿವೆ.