ಐರನ್ 883 ಬಿಎಸ್ 6 ಬೈಕಿನ ಬೆಲೆ ಏರಿಕೆ ಮಾಡಿದ ಹಾರ್ಲೆ-ಡೇವಿಡ್ಸನ್

DriveSpark Kannada 2020-06-20

Views 2

ಹಾರ್ಲೆ-ಡೇವಿಡ್ಸನ್ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿರುವ ತನ್ನ ಐರನ್ 883 ಬಿಎಸ್ 6 ಬೈಕಿನ ಬೆಲೆಯನ್ನು ಹೆಚ್ಚಿಸಿದೆ. ಐರನ್ 883 ರೋಡ್‌ಸ್ಟರ್ ಬೈಕ್ ಅನ್ನು ಈ ವರ್ಷದ ಮಾರ್ಚ್ ತಿಂಗಳಿನಲ್ಲಿ ಬಿಎಸ್ 6 ಎಂಜಿನ್‌ನೊಂದಿಗೆ ಅಪ್‌ಡೇಟ್ ಮಾಡಲಾಗಿತ್ತು.

ದೆಹಲಿಯ ಎಕ್ಸ್ ಶೋರೂಂ ದರದಂತೆ 9.26 ಲಕ್ಷ ರೂಪಾಯಿ ಬೆಲೆಯನ್ನು ಹೊಂದಿರುವ ಈ ಬೈಕಿನ ಬೆಲೆಯನ್ನು 12,000 ರೂಪಾಯಿಗಳಷ್ಟು ಏರಿಕೆ ಮಾಡಲಾಗಿದೆ. ಬೆಲೆ ಏರಿಕೆಯ ನಂತರ ಈ ಬೈಕಿನ ಬೆಲೆ 9.38 ಲಕ್ಷ ರೂಪಾಯಿಗಳಾಗಿದೆ.

ಈ ಬೈಕ್ ಅನ್ನು ಆನ್‌ಲೈನ್‌ನಲ್ಲೂ ಮಾರಾಟ ಮಾಡಲಾಗುವುದು. ಈ ಬೈಕ್ ಅನ್ನು ಬ್ಲ್ಯಾಕ್ ಡೆನಿಮ್, ಬಾರ್ರಾಕುಡಾ ಸಿಲ್ವರ್ ಡೆನಿಮ್, ರಿವರ್ ರಾಕ್ ಗ್ರೇ ಹಾಗೂ ಡ್ಯುಯಲ್ ಟೋನ್ ಸ್ಕಾರ್ಚ್ಡ್ ಆರೆಂಜ್ / ಸಿಲ್ವರ್ ಫ್ಲಕ್ಸ್ ಎಂಬ ನಾಲ್ಕು ಬಣ್ಣಗಳಲ್ಲಿ ಮಾರಾಟ ಮಾಡಲಾಗುವುದು.

Share This Video


Download

  
Report form
RELATED VIDEOS