ಚಿರು ಸಿನಿಮಾಗೆ ವಾಯ್ಸ್ ಡಬ್ಬಿಂಗ್ ಮಾಡ್ತಿದ್ದಾರೆ ಧ್ರುವ ಸರ್ಜಾ |Dhurva Sarja Voice Dubbed to chiru movie

KannadaSuddi 2020-06-25

Views 12

ಚಿರಂಜೀವಿ ಸರ್ಜಾ ನಮ್ಮನ್ನೆಲ್ಲ ಅಗಲಿ ಈಗಾಗಲೇ ಎರಡು ವಾರಗಳು ಕಳೆದು ಹೋಗಿವೆ, ಹೀಗಿರುವಾಗ ಚಿರು ನಿಧನವಾದ ಬೆನ್ನಲ್ಲೇ ಚಿರು ಒಪ್ಪಿಕೊಂಡ ಚಿತ್ರಗಳ ಕಥೆ ಏನು ಅನ್ನೋ ಮಾತುಗಳು ಸಹ ಕೇಳಿ ಬರ್ತಾ ಇದೆ. ಅಷ್ಟೇ ಅಲ್ಲದೇ ಚಿರು ಸುಮಾರು 5 ರಿಂದ 6 ಸಿನಿಮಾಗಳನ್ನು ಒಪ್ಪಿಕೊಂಡಿದ್ದರು ಅನ್ನೋ ಮಾತುಗಳು ಇದ್ದು, ಅದರಲ್ಲಿ ಕೆಲವು ಸಿನಿಮಾಗಳೂ ಶೂಟಿಂಗ್ ಮುಗಿಸಿದ್ರೆ, ಇನ್ನು ಕೆಲವು ಸಿನಿಮಾಗಳು ಇನ್ನು ಶೂಟಿಂಗ್ ಹಂತದಲ್ಲಿ ಇದ್ದವು, ಇನ್ನು ಕೆಲವು ಸಿನಿಮಾ ಸೆಟ್ಟೆರಬೇಕಾಗಿತ್ತು, ಅದರಲ್ಲಿ ಪ್ರಮುಖವಾಗಿ `ಏಪ್ರಿಲ್' ಸಿನಿಮಾ ಚಿತ್ರ ಮುಹೂರ್ತವಾದ್ದರೂ, ಸಿನಿಮಾ ಶೂಟಿಂಗ್ ಮುಗಿಸಿರಲಿಲ್ಲ, ಇದರ ಜೊತೆಯಲ್ಲಿ `ರಾಜ ಮಾರ್ತಾಂಡ' ಮತ್ತು `ಕ್ಷತ್ರಿಯ' ಸಿನಿಮಾ ಕೂಡ ಒಪ್ಪಿಕೊಂಡಿದ್ದು,. ಇದರಲ್ಲಿ ಕ್ಷತ್ರಿಯಾ ಸಿನಿಮಾ ಶೇ.60 ಶೂಟಿಂಗ್ ಮುಗಿಸಿದ್ರೆ `ರಾಜ ಮಾರ್ತಾಂಡ' ಸಿನಿಮಾ ಒಂದು ಹಾಡಿನ ಶೂಟಿಂಗ್ ಮತ್ತು ಚಿರು ಭಾಗದ ಡಬ್ಬಿಂಗ್ ಮಾತ್ರ ಬಾಕಿ ಇತ್ತು. ಈಗ ಈ ಚಿತ್ರದ ಡಬ್ಬಿಂಗ್ ಕೆಲಸವನ್ನು ಜುಲೈ ತಿಂಗಳಿನಲ್ಲಿ ಶುರುಮಾಡಲು ಚಿತ್ರತಂಡ ರೆಡಿಮಾಡಿಕೊಂಡಿದ್ದು, ಈ ಚಿತ್ರದ ಚಿರು ಭಾಗದ ಡಬ್ಬಿಂಗ್ ಅನ್ನು ಧ್ರುವ ಸರ್ಜಾ ಮಾಡಿ ಮುಗಿಸಿಕೊಡಲಿದ್ದಾರೆ ಅನ್ನೋ ಮಾಹಿತಿ ಈಗ ಲಭ್ಯವಾಗಿದೆ. ಜುಲೈ ತಿಂಗಳಲ್ಲಿ ಧ್ರುವ ಸರ್ಜಾ `ರಾಜ ಮಾರ್ತಾಂಡ' ಚಿತ್ರಕ್ಕೆ ಧ್ರುವ ಸರ್ಜಾ ಡಬ್ಬಿಂಗ್ ಮಾಡಿಕೊಡಲಿದ್ದಾರಂತೆ. ಇದರ ಜೊತೆಯಲ್ಲಿ ಕ್ಷತ್ರಿಯಾ ಚಿತ್ರದ ಶೇ 60 ರಷ್ಟು ಶೂಟಿಂಗ್ ಮುಗಿದಿರುವ ಹಿನ್ನೆಲೆಯಲ್ಲಿ ಜುಲೈ ತಿಂಗಳಿನಲ್ಲಿ ಆ ಬಗ್ಗೆಯು ತೀರ್ಮಾನಗಳನ್ನು ತೆಗೆದುಕೊಳ್ಳಲಾಗುವುದಂತೆ.
ಇನ್ನು ಲಾಕ್‍ಡೌನ್‍ನ ಒಂದು ದಿನ ಮುಂಚೆ ರಿಲೀಸ್ ಆಗಿದ್ದ `ಶಿವಾರ್ಜುನ' ಸಿನಿಮಾ ಮತ್ತೆ ರೀ ರಿಲೀಸ್ ಮಾಡೋ ಪ್ಲಾನ್‍ನಲ್ಲಿ ಇದ್ದಾರೆ, ಚಿತ್ರದ ನಿರ್ಮಾಪಕ ಶಿವಾರ್ಜುನ ಚಿತ್ರಮಂದಿರದಲ್ಲಿ ಚಿತ್ರಪ್ರದರ್ಶನಕ್ಕೆ ಸರ್ಕಾರದಿಂದ ಅನುಮತಿ ದೊರೆದ ಕೂಡಲೇ `ಶಿವಾರ್ಜುನ' ಸಿನಿಮಾ ರೀ ರಿಲೀಸ್ ಮಾಡೋದಾಗಿ ಹೇಳಿಕೊಂಡಿದ್ದಾರೆ. ಒಟ್ಟಿನಲ್ಲಿ ಚಿರು ಇಲ್ಲದ ಹಿನ್ನೆಲೆ ಈಗ ಅಣ್ಣನ ಸಿನಿಮಾಗಳಿಗೆ ತಮ್ಮ ಧ್ರವ ಸರ್ಜಾ ಸಾಥ್ ನೀಡ್ತಾ ಇದ್ದು, ಈ ಹಿಂದೆ ಶಂಕರ್‍ನಾಗ್ ನಿಧನರಾದ ಸಮಯದಲ್ಲಿ ಅಣ್ಣ ಅನಂತ್ ನಾಗ್, `ನಿಗೂಢ ರಹಸ್ಯ' ಚಿತ್ರಕ್ಕೆ ಡಬ್ಬಿಂಗ್ ಮಾಡಿಕೊಟ್ಟಿದ್ರು.

Share This Video


Download

  
Report form
RELATED VIDEOS