ಶೀಘ್ರದಲ್ಲೇ ದೇಶಿಯ ಮಾರುಕಟ್ಟೆಯಲ್ಲಿ ಈ ಸೆಡಾನ್ ಕಾರ್ ಅನ್ನು ಡೀಸೆಲ್ ಮಾದರಿಯಲ್ಲಿ ಬಿಡುಗಡೆಗೊಳಿಸುವುದಾಗಿ ಕಂಪನಿ ಹೇಳಿದೆ. ಹೋಂಡಾ ಸಿವಿಕ್ ಬಿಎಸ್ 6 ಡೀಸೆಲ್ ಕಾರ್ ಅನ್ನು ಮುಂದಿನ ವಾರ ಭಾರತದಲ್ಲಿ ಬಿಡುಗಡೆಗೊಳಿಸುವ ನಿರೀಕ್ಷೆಗಳಿವೆ.
ಈ ಡೀಸೆಲ್ ಮಾದರಿಯ ಪ್ರೀ ಬುಕ್ಕಿಂಗ್ ಗಳನ್ನು ಈಗಾಗಲೇ ಆರಂಭಿಸಲಾಗಿದೆ. ಹೋಂಡಾ ಸಿವಿಕ್ ಬಿಎಸ್ 6 ಡೀಸೆಲ್ ಕಾರಿನಲ್ಲಿ 1.6-ಲೀಟರಿನ ಐ-ಡಿಟಿಇಸಿ ನಾಲ್ಕು ಸಿಲಿಂಡರ್ ಡೀಸೆಲ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 4,000 ಆರ್‌ಪಿಎಂನಲ್ಲಿ 118 ಬಿಹೆಚ್‌ಪಿ ಪವರ್ ಹಾಗೂ 2,000 ಆರ್‌ಪಿಎಂನಲ್ಲಿ 300 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ನಲ್ಲಿ ಆರು-ಸ್ಪೀಡಿನ ಮ್ಯಾನುವಲ್ ಟ್ರಾನ್ಸ್ ಮಿಷನ್ ಅಳವಡಿಸಲಾಗಿದೆ.