ಮನೆಯಲ್ಲಿ ಒಂದು ಅಮೃತಬಳ್ಳಿ ಗಿಡವಿದ್ದರೆ ಇದರಿಂದ ಹತ್ತಾರು ರೋಗಗಳನ್ನು ಗುಣ ಪಡಿಸಬಹುದು. ಡೆಂಗ್ಯೂ, ಚಿಕನ್‌ಗುನ್ಯಾ, ಹೆಚ್1ಎನ್1ನಂಥ ರೋಗಗಳನ್ನು ಗುಣಪಡಿಸುವಲ್ಲಿ ಅಮೃತಬಳ್ಳಿ ಪರಿಣಾಮಕಾರಿಯಾಗಿದೆ. ಇದನ್ನು ಆಯುರ್ವೇದಲ್ಲಿ ಅನೇಕ ಕಾಯಿಲೆಗಳನ್ನು ಗುಣಪಡಿಸಲು ಬಳಸಲಾಗುವುದು.
ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಅಮೃತಬಳ್ಳಿ ಪರಿಣಾಮಕಾರಿಯಾಗಿದ್ದು ಆಯುಷ್ ಇಲಾಖೆ ಕೂಡ ಇದರ ಕಷಾಯ ಮಾಡಿ ಕುಡಿಯುವಂತೆ ಸಲಹೆ ನೀಡಿದೆ. ಮಲೇರಿಯಾ ರೋಗವನ್ನು ತಡೆಗಟ್ಟಲು ಅಶ್ವಗಂಧ, ಅಮೃತಬಳ್ಳಿ, ಯಷ್ಠಿಮಧು ಇದರ ಕಷಾಯ ಪರಿಣಾಮಕಾರಿಯಾಗಿದೆ. ಇನ್ನು ಕೊರೊನಾವೈರಸ್ ತಡೆಗಟ್ಟುವಲ್ಲಿ ಇದು ಎಷ್ಟು ಪರಿಣಾಮಕಾರಿ ಎಂಬುವುದರ ಬಗ್ಗೆ ಅಧ್ಯಯನ ನಡೆಯುತ್ತಿದೆ.
ಇಷ್ಟೆಲ್ಲಾ ಗುಣಗಳಿರುವ ಅಮೃತಬಳ್ಳಿ ವರ್ಷದಿಂದ ವರ್ಷಕ್ಕೆ ಭಾರತದ ಹೆಚ್ಚಾಗುತ್ತಿರುವ ಮಧುಮೇಹ ಕಾಯಿಲೆಯನ್ನು ನಿಯಂತ್ರಣದಲ್ಲಿಡುವಲ್ಲಿ ಪರಿಣಾಮಕಾರಿಯಾಗಿದೆ. ಬದಲಾಗಿರುವ ಜೀವನಶೈಲಿ, ಆಹಾರಶೈಲಿ, ಒತ್ತಡದ ಬದುಕು ಇವೆಲ್ಲಾ ಮಧುಮೇಹ ಸಮಸ್ಯೆಗೆ ಪ್ರಮುಖ ಕಾರಣಗಳಾಗಿವೆ. ಟೈಪ್ 2 ಮಧುಮೇಹ ಬಂದರೆ ನಿಯಂತ್ರಣದಲ್ಲಿಡಬಹುದೇ ಹೊರತು ಗುಣಪಡಿಸಲು ಸಾಧ್ಯವಿಲ್ಲ. ಟೈಪ್ 1 ಮಧುಮೇಹ ಯಾವುದೇ ವಯಸ್ಸಿನಲ್ಲಿ ಕಂಡು ಬರಬಹುದು, ಆದರೆ ಟೈಪ್ 2 ಮಧುಮೇಹ ಸಾನಾನ್ಯವಾಗಿ 40 ವರ್ಷ ಮೇಲ್ಪಟ್ಟವರಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆ.
ಮಧು ಮೇಹ ಬಂದಾಗ ದೇಹ ಇನ್ಸುಲಿನ್ ಉತ್ಪತ್ತಿ ಮಾಡಲು ಅಸಮರ್ಥವಾಗುತ್ತದೆ. ಆಗ ಔಷಧಿ ಅಥವಾ ಚುಚ್ಚುಮದ್ದಿನ ಮೂಲದ ದೇಹಕ್ಕೆ ಇನ್ಸುಲಿನ್ ಸಿಗುವಂತೆ ಮಾಡಬೇಕಾಗುತ್ತದೆ. ಪ್ರತಿದಿನ ವ್ಯಾಯಾಮ ಮಾಡುವುದು, ಸಮತೋಲನ ಆಹಾರ ಪದ್ಧತಿ ಇವೆಲ್ಲಾ ಒಟ್ಟು ಮೊತ್ತ ಆರೋಗ್ಯಕ್ಕೆ ತುಂಬಾನೇ ಸಹಕಾರಿ. ಆಯುರ್ವೇದದಲ್ಲಿ ಮಧುಮೇಹ ನಿಯಂತ್ರಿಸಲು ಅನೇಕ ಗಿಡಮೂಲಿಕೆಗಳಿವೆ, ಅದರಲ್ಲೊಂದು ಅಮೃತಬಳ್ಳಿ.
#Giloy #Giloyfordiabetes #diabetes #amruthaballi