ಹೈದರಾಬಾದ್ ಮೂಲದ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಸ್ಟಾರ್ಟ್ ಅಪ್ ಕಂಪನಿಯಾದ ಅಟುಮೊಬಿಲ್ಸ್ ಪ್ರೈ. ಲಿಮಿಟೆಡ್ ತನ್ನ ಮೊದಲ ಎಲೆಕ್ಟ್ರಿಕ್ ಬೈಕ್ ಆದ ಆಟಮ್ 1.0ವನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ದೇಶದೆಲ್ಲೆಡೆ ಮಾರಾಟವಾಗುವ ಆಟಮ್ 1.0 ಎಲೆಕ್ಟ್ರಿಕ್ ಬೈಕಿನ ಆರಂಭಿಕ ಬೆಲೆ ರೂ.50,000ಗಳಾಗಿದೆ.
ಆಟಮ್ 1.0 ಎಲೆಕ್ಟ್ರಿಕ್ ಬೈಕ್ ವಿಂಟೇಜ್ ಕೆಫೆ-ರೇಸರ್ ಶೈಲಿಯ ವಿನ್ಯಾಸವನ್ನು ಹೊಂದಿದೆ. ಈ ಎಲೆಕ್ಟ್ರಿಕ್ ಬೈಕ್ ಹದಿಹರೆಯದವರು ಹಾಗೂ ವಯಸ್ಕರು ಸೇರಿದಂತೆ ಎಲ್ಲಾ ವಯೋಮಾನದವರಿಗೆ ಸೂಕ್ತವಾಗಿದೆ.
ಕಮರ್ಷಿಯಲ್ ಬಳಕೆಗೆ ಸಿದ್ದವಾಗಿರುವ ಈ ಬೈಕ್ ಅನ್ನು ಇಂಟರ್ ನ್ಯಾಷನಲ್ ಸೆಂಟರ್ ಫಾರ್ ಅಟೋಮೋಟಿವ್ ಟೆಕ್ನಾಲಜಿಯು ಕಡಿಮೆ ವೇಗದ ಎಲೆಕ್ಟ್ರಿಕ್ ದ್ವಿಚಕ್ರ ವಾಹನವೆಂದು ಪ್ರಮಾಣೀಕರಿಸಿದೆ.