ಅಮೆರಿಕಾ ಮೂಲದ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಹಾರ್ಲೆ-ಡೇವಿಡ್ಸನ್ ತನ್ನ ಹೊಸ ವ್ಯವಹಾರದ ಭಾಗವಾಗಿ ಭಾರತದ ಖ್ಯಾತ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಹೀರೋ ಮೊಟೊಕಾರ್ಪ್ ಜೊತೆಗೆ ಪಾಲುದಾರಿಕೆಯನ್ನು ಮಾಡಿಕೊಂಡಿದೆ.
ಈ ವ್ಯವಹಾರವನ್ನು ದಿ ರಿವೈರ್ ಎಂದು ಕರೆಯಲಾಗುತ್ತದೆ. ಈ ಪಾಲುದಾರಿಕೆಯ ನಂತರ ಹೀರೋ ಮೊಟೊಕಾರ್ಪ್ ದೇಶಾದ್ಯಂತವಿರುವ ತನ್ನ ಶೋರೂಂಗಳಲ್ಲಿ ಹಾರ್ಲೆ-ಡೇವಿಡ್ಸನ್ ಕಂಪನಿಯ ಮೋಟರ್ ಸೈಕಲ್‌ಗಳನ್ನು ಮಾರಾಟ ಮಾಡಲು ಹಾಗೂ ಸರ್ವೀಸ್ ಮಾಡಲು ಸಾಧ್ಯವಾಗಲಿದೆ.
ಇದರ ಜೊತೆಗೆ ಹಾರ್ಲೆ-ಡೇವಿಡ್ಸನ್ ಬೈಕುಗಳ ಬಿಡಿಭಾಗಗಳು, ರೈಡಿಂಗ್ ಗೇರ್ ಗಳು ಇನ್ನು ಮುಂದೆ ಹಾರ್ಲೆ-ಡೇವಿಡ್ಸನ್ ಡೀಲರ್ ಗಳು ಹಾಗೂ ದೇಶಾದ್ಯಂತವಿರುವ ಹೀರೋ ಮೋಟೊಕಾರ್ಪ್ ಡೀಲರ್ ಗಳ ಬಳಿ ಲಭ್ಯವಿರಲಿದೆ.
ಹಾರ್ಲೆ ಡೇವಿಡ್ಸನ್ ಹೀರೋ ಮೋಟೋಕಾರ್ಪ್ ಕಂಪನಿಗಳ ಸಹಭಾಗಿತ್ವದ ಬಗೆಗಿನ ಮತ್ತಷ್ಟು ವಿವರಗಳಿಗಾಗಿ ಈ ವೀಡಿಯೊ ನೋಡಿ.