ಎಂಜಿ ಮೋಟರ್ ಇಂಡಿಯಾ ಕಂಪನಿಯು ತನ್ನ ಝಡ್ಎಸ್ ಎಲೆಕ್ಟ್ರಿಕ್ ಎಸ್‌ಯುವಿಗಾಗಿ ಚಂದಾದಾರಿಕೆ ಯೋಜನೆಯನ್ನು ಆರಂಭಿಸಿದೆ. ಈ ಎಲೆಕ್ಟ್ರಿಕ್ ಎಸ್‌ಯುವಿಯನ್ನು ಖರೀದಿಸ ಬಯಸುವವರು 36 ತಿಂಗಳ ಕಾಲ ಪ್ರತಿ ತಿಂಗಳು ರೂ.49,999 ಪಾವತಿಸಬೇಕಾಗುತ್ತದೆ.
ಎಂಜಿ ಮೋಟಾರ್ ಇಂಡಿಯಾ ಕಂಪನಿಯು ಜೂಮ್‌ಕಾರ್ ಹಾಗೂ ಒರಿಕ್ಸ್ ಕಂಪನಿಗಳ ಜೊತೆಗೂಡಿ ಈ ಚಂದಾದಾರಿಕೆ ಯೋಜನೆಯನ್ನು ಆರಂಭಿಸಿದೆ. ಈ ಚಂದಾದಾರಿಕೆ ಯೋಜನೆಯು ಸದ್ಯಕ್ಕೆ ಬೆಂಗಳೂರು, ಮುಂಬೈ, ಪುಣೆ, ದೆಹಲಿ-ಎನ್‌ಸಿಆರ್ ಗಳಲ್ಲಿ ಲಭ್ಯವಿದೆ.
ಈ ಯೋಜನೆಯನ್ನು ಶೀಘ್ರದಲ್ಲೇ ಇತರ ನಗರಗಳಿಗೆ ವಿಸ್ತರಿಸಲಾಗುವುದು ಎಂದು ಕಂಪನಿ ತಿಳಿಸಿದೆ.
ಝಡ್ಎಸ್ ಎಲೆಕ್ಟ್ರಿಕ್ ಎಸ್‌ಯುವಿಯ ಚಂದಾದಾರಿಕೆ ಯೋಜನೆ ಬಗೆಗಿನ ಮತ್ತಷ್ಟು ವಿವರಗಳಿಗಾಗಿ ಈ ವೀಡಿಯೊ ನೋಡಿ.