ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಎಬಿ ಡಿವಿಲಿಯರ್ ಪುನರಾಗಮನದ ಬಗ್ಗೆ ಹಲವು ತಿಂಗಳುಗಳಿಂದ ಚರ್ಚೆಗಳು ನಡೆಯುತ್ತಿದೆ. ಅಭಿಮಾನಿಗಳು ಕೂಡ ಈ ಸುದ್ದಿ ನಿಜವಾಗಲಿ ಎಂದು ಕಾಯುತ್ತಿದ್ದರು. ಕಡೆಗೂ ಆ ಕ್ಷಣ ಈಗ ಹತ್ತಿರವಾದಂತಿದೆ. ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿಯ ಮುಖ್ಯಸ್ಥ ಗ್ರೇಮ್ ಸ್ಮಿತ್ ಈ ಬಗ್ಗೆ ಸುಳಿವನ್ನು ನೀಡಿದ್ದಾರೆ. ಮುಂದಿನ ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿ ಡಿವಿಲಿಯರ್ಸ್ ಪುನರಾಗಮನಕ್ಕೆ ವೇದಿಕೆಯಾಗುವ ಸಾಧ್ಯತೆಯಿದೆ.
South Africa Cricket Council director Graeme Smith hints at AB de Villiers’ comeback