ಸ್ಕೋಡಾ ಇಂಡಿಯಾ ಕಂಪನಿಯು ಇತ್ತೀಚಿಗೆ ಅನಾವರಣಗೊಂಡ ಕುಶಾಕ್ ಎಸ್‌ಯುವಿ ಸೇರಿದಂತೆ ಕೆಲವು ಹೊಸ ವಾಹನಗಳನ್ನು ಶೀಘ್ರದಲ್ಲೇ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದೆ.
ಜೂನ್ ಅಂತ್ಯದ ವೇಳೆಗೆ ಹೊಸ ಕುಶಾಕ್ ಎಸ್‌ಯುವಿಯನ್ನು ಬಿಡುಗಡೆಗೊಳಿಸಲಾಗುತ್ತದೆ. ಬಿಡುಗಡೆಯ ಸಮಯದಲ್ಲಿಯೇ ಈ ಎಸ್‌ಯುವಿಯ ಬುಕ್ಕಿಂಗ್'ಗಳನ್ನು ಆರಂಭಿಸಲಾಗುತ್ತದೆ.
ಜುಲೈ ತಿಂಗಳಿನಿಂದ ಈ ಎಸ್‌ಯುವಿಯ ವಿತರಣೆಯನ್ನು ಆರಂಭಿಸಲಾಗುವುದು ಎಂದು ಕಂಪನಿಯ ನಿರ್ದೇಶಕರಾದ ಜಾಕ್ ಹೊಲಿನ್ಸ್ ಟ್ವಿಟರ್ ಮೂಲಕ ಮಾಹಿತಿ ನೀಡಿದ್ದಾರೆ. ಸ್ಕೋಡಾ ಕುಶಾಕ್ ಫೋಕ್ಸ್ ವ್ಯಾಗನ್ ಗ್ರೂಪ್'ನ ಇಂಡಿಯಾ 2.0 ಅಡಿಯಲ್ಲಿ ಆರಂಭವಾಗುವ ಮೊದಲ ವಾಹನವಾಗಿದೆ.
ಸ್ಕೋಡಾ ಕುಶಾಕ್ ಎಸ್‌ಯುವಿ ಬಗೆಗಿನ ಮತ್ತಷ್ಟು ವಿವರಗಳಿಗಾಗಿ ಈ ವೀಡಿಯೊ ನೋಡಿ.