ಹ್ಯುಂಡೈ ಐ20 ಎನ್ ಲೈನ್ ಪರ್ಫಾಮೆನ್ಸ್ ಆವೃತ್ತಿಯು ಭಾರತದಲ್ಲಿ ಅನಾವರಣಗೊಂಡಿದೆ. ಭಾರೀ ನೀರಿಕ್ಷೆ ಹುಟ್ಟುಹಾಕಿರುವ ಹೊಸ ಐ20 ಎನ್ ಲೈನ್ ಮಾದರಿಯನ್ನು ಹ್ಯುಂಡೈ ಕಂಪನಿಯು ಇಂದು ಅನಾವರಣಗೊಳಿಸಿರುವ ಮೂಲಕ ಶೀಘ್ರದಲ್ಲೇ ಬಿಡುಗಡೆ ಮಾಡುವ ಯೋಜನೆಯಲ್ಲಿದೆ. ಹೊಸ ಎನ್ ಲೈನ್ ಆವೃತ್ತಿಯು ಸ್ಟ್ಯಾಂಡರ್ಡ್ ಮಾದರಿಗಿಂತಲೂ ಸಾಕಷ್ಟು ಹೊಸ ಬದಲಾವಣೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸುತ್ತಿದ್ದು, ಭಾರತದಲ್ಲಿ ಹ್ಯುಂಡೈ ಕಂಪನಿಯು ಬಿಡುಗಡೆ ಮಾಡುತ್ತಿರುವ ಮೊದಲ ಎನ್ ಲೈನ್ ಮಾದರಿ ಇದಾಗಿದೆ. ಹಾಗಾದರೆ ಪರ್ಫಾಮೆನ್ಸ್ ಪ್ರಿಯರನ್ನು ಸೆಳೆಯಲು ಸಜ್ಜಾಗಿರುವ ಐ20 ಎನ್ ಲೈನ್ ಮಾದದರಿಯಲ್ಲಿ ಏನೆಲ್ಲಾ ವಿಶೇಷತೆಗಳಿವೆ ಎಂಬುವುದನ್ನು ಈ ವಿಡಿಯೋದಲ್ಲಿ ತಿಳಿಯೋಣ.