ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯುವುದಾಗಿ ಘೋಷಿಸಿದ ಪ್ರಧಾನಿ ಮೋದಿ
ದೆಹಲಿ: ಕೇಂದ್ರ ಸರ್ಕಾರ ರೂಪಿಸಿದ್ದ ವಿವಾದಕ್ಕೆ ಕಾರಣವಾಗಿದ್ದ ಮುರು ಕೃಷಿ ಕಾಯ್ದೆಗಳನ್ನು ಹಿಂಪಡೆಯುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದರು.
ದೆಹಲಿ ಗಡಿ ಸೇರಿದಂತೆ ದೇಶದ ವಿವಿಧೆಡೆ ಕೋಟ್ಯಂತರ ಜನ ಭಾಗವಹಿಸಿ ಕೇಂದ್ರದ ವಿರುದ್ಧ ಹೋರಾಡಿದ್ದ ರೈತ ಸಂಘಟನೆಗಳಿಗೆ ಈ ಮೂಲಕ ಜಯ ಸಿಕ್ಕಂತಾಗಿದೆ.
ಇಂದು ಗುರುನಾನಕ್ ಜಯಂತಿ ಸಂದರ್ಭದಲ್ಲಿ ದೇಶವನ್ನು ಉದ್ದೇಶಿಸಿ ಬೆಳಗ್ಗೆ 9 ಗಂಟೆಗೆ ಮಾತಾಡಿದ , ಅವರು ತಮ್ಮ ಸರ್ಕಾರ ರೈತರ ಹಿತಕ್ಕಾಗಿ ಯಾವೆಲ್ಲಾ ಯೋಜನೆಗಳನ್ನು ಜಾರಿಗೆ ತಂದಿದೆ, ರೈತ ಕಾರ್ಯಕ್ರಮಗಳ ಬಜೆಟ್ ಅನ್ನು ಎಷ್ಟಕ್ಕೆ ಏರಿಸಿದೆ ಎಂದು ವಿವರಿಸಿ, ನಂತರ ಕೃಷಿ ಕಾಯ್ದೆಗಳನ್ನು ಹಿಂಪಡೆಯುವುದಾಗಿ ಹೇಳಿದರು.
ನವೆಂಬರ್ 26 2020ರಂದು ರೈತರು ಆರಂಭಿಸಿದ್ದ ಹೋರಾಟದಲ್ಲಿ ಇದುವರೆಗೆ 650ಕ್ಕೂ ಹೆಚ್ಚು ರೈತರು ಬಲಿಯಾಗಿದ್ದರು. ಮೋದಿಯವರು ನಿರ್ಧಾರ ಪ್ರಕಟಿಸಿರುವ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸಂತಸ ವ್ಯಕ್ತವಾಗಿದ್ದು, ಕೊನೆಗೂ ರೈತ ಹೋರಾಟಕ್ಕೆ ಮಣಿದ ಒಕ್ಕೂಟ ಸರ್ಕಾರ: ಚಾರಿತ್ರಿಕ ರೈತ ಹೋರಾಟಕ್ಕೆ ಜಯ, ರೈತರಿಗೆ ಕ್ಷಮೆ ಯಾಚಿಸಿ ಕೃಷಿ ಕಾನೂನುಗಳನ್ನು ರದ್ದುಪಡಿಸಿದ ಮೋದಿ ಎಂಬ ಪೋಸ್ಟ್ ಗಳು ವ್ಯಾಪಕವಾಗಿ ಹಂಚಿಕೆಯಾಗುತ್ತಿವೆ.
video credit @Narendra Modi