ಕಿಯಾ ಕಂಪನಿಯ ಶೀಘ್ರದಲ್ಲೇ ತನ್ನ ನಾಲ್ಕನೇ ಕಾರು ಉತ್ಪನ್ನವಾದ ಕಾರೆನ್ಸ್ ಎಸ್‌ಯುವಿಯನ್ನು ಭಾರತದಲ್ಲಿ ಬಿಡುಗಡೆ ಮಾಡುತ್ತಿದ್ದು, ಹೊಸ ಕಾರು ಬಿಡುಗಡೆಗೂ ಮುನ್ನ ಕಾರ್ಯಕ್ಷಮತೆ ಕುರಿತಂತೆ ವಿವಿಧ ಹಂತದ ಟೆಸ್ಟ್ ಡ್ರೈವ್ ಮಾಡಿದೆವು. ಟೆಸ್ಟ್ ಡ್ರೈವ್ ವೇಳೆ ಹೊಸ ಕಾರಿನ ಡೀಸೆಲ್ ಸ್ವಯಂಚಾಲಿತ ಪವರ್‌ಟ್ರೇನ್ ಆಯ್ಕೆ ಹೊಂದಿರುವ ಲಗ್ಷುರಿ ಪ್ಲಸ್ ರೂಪಾಂತರವನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ಮೂರು-ಸಾಲಿನ ಎಂಪಿವಿ ಪ್ರಾಯೋಗಿಕ ವೈಶಿಷ್ಟ್ಯತೆ ಹೊಂದಿರುವ ಕಾರೆನ್ಸ್ ಕಾರು ಆರಾಮದಾಯಕವಾದ ಎರಡನೇ ಮತ್ತು ಮೂರನೇ ಸಾಲಿನ ಆಸನಗಳನ್ನು ಹೊಂದಿದೆ. ಹಾಗಾದರೆ ಹೊಸ ಕಾರೆನ್ಸ್ ಕಾರಿನಲ್ಲಿ ಇನ್ನು ಏನೆಲ್ಲಾ ವಿಶೇಷತೆಗಳಿವೆ? ಪ್ರತಿಸ್ಪರ್ಧಿ ಮಾದರಿಗಿಂತಲೂ ಹೊಸ ಕಾರು ಹೇಗೆ ವಿಭಿನ್ನವಾಗಿದೆ ಎನ್ನುವುದನ್ನು ಈ ವಿಡಿಯೋದಲ್ಲಿ ವೀಕ್ಷಿಸಿ.
#KiaCarens #Review #TheNextFromKia #FromADifferentWorld #MovementThatInspires