ಖಾರ್ಕೀವ್‌ನಿಂದ ದೆಹಲಿಗೆ ಬಂದ ರಕ್ಷಾ ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿ, ತಮ್ಮ ಸುತ್ತ ನಡೆದ ಮಿಸೈಲ್ ದಾಳಿಗಳ ಬಗ್ಗೆ ವಿವರಿಸಿದರು. ಪ್ರಾಣ ಪಣಕ್ಕಿಟ್ಟು ಗಡಿಯತ್ತ ಹೊರೆಟೆವು, ನಾವು ಹೊರಟ ಬೆನ್ನಲ್ಲೇ ನಮ್ಮ ಕಾಲೇಜಿನ ಮೇಲೆ ಮಿಸೈಲ್ ದಾಳಿಯಾಗಿ ಇಡೀ ಕಟ್ಟಡ ದ್ವಂಸವಾಗಿದೆ. ನಮ್ಮ ಭಾವನೆ, ಕನಸುಗಳು ಒಡೆದು ಹೋದಂತೆ ಭಾಸವಾಗ್ತಿದೆ ಎಂದು ಬಿಜಾಪುರ ಮೂಲದ ವಿದ್ಯಾರ್ಥಿನಿ ರಕ್ಷಾ ಭಾವುಕರಾಗಿ ಮಾತನಾಡಿದ್ದಾರೆ. ಅಲ್ಲದೇ ರಾಯಭಾರಿ ಕಚೇರಿ ಕೊಂಚ ತುರ್ತು ಸಂದೇಶ ನೀಡಬಹುದಿತ್ತು. ಅಂತಹ ಒಂದು ಸಂದೇಶ ಸಿಕ್ಕಿದ್ರೆ ನಾವಲ್ಲಿ ಸಿಕ್ಕಿಕೊಳ್ಳುತ್ತಿರಲಿಲ್ಲ ಎಂದಿದ್ದಾರೆ.
#PublicTV #Ukraine #India #Russia