Traffic Police Advise BBMP To Do Drunk & Drive Tests For Garbage Truck Drivers

Public TV 2022-04-21

Views 7

Traffic Police Advise BBMP To Do Drunk & Drive Tests For Garbage Truck Drivers

#PublicTV #BBMP #TrafficPolice

ಕಳೆದೊಂದು ತಿಂಗಳಲ್ಲಿ ಬಿಬಿಎಂಪಿ ಕಸದ ಲಾರಿಗೆ ಮೂವರು ಬಲಿಯಾಗಿದ್ದಾರೆ. ಬಿಬಿಎಂಪಿ ಕಸದ ಲಾರಿಗಳು ಯಮಸ್ವರೂಪಿಗಳಂತೆ ಮಾರ್ಪಟ್ಟಿವೆ. ಪಾಲಿಕೆ ನಿರ್ಲಕ್ಷ್ಯದಿಂದ ಪದೇ ಪದೇ ಅಪಘಾತ ಆಗ್ತಿರೋದಕ್ಕೆ ಸಾರ್ವಜನಿಕರು ರೊಚ್ಚಿಗೆದ್ದಿದ್ದಾರೆ. ಜನಾಕ್ರೋಶದ ಬೆನ್ನಲ್ಲೇ ಎಚ್ಚೆತ್ತಿರುವ ಬಿಬಿಎಂಪಿ ಅಮಾಯಕರ ಜೀವಹಾನಿ ತಪ್ಪಿಸಲು ಹೊಸ ಪ್ಲಾನ್ ರೂಪಿಸಿದೆ. ಕಸದ ಲಾರಿ ಹಾಗೂ ಬಿಎಂಟಿಸಿ ಚಾಲಕರು ಕುಡಿದು ವಾಹನ ಚಲಿಸ್ತಿದ್ದಾರೆಂಬ ಆರೋಪ ದಟ್ಟವಾಗಿ ಕೇಳಿ ಬರ್ತೀದೆ. ಹೀಗಾಗಿ ಡ್ರಿಂಕ್ & ಡ್ರೈವ್ ತಪಾಸಣೆಗೆ ಸಂಚಾರಿ ಪೊಲೀಸರು ಸಲಹೆ ನೀಡಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಆಲ್ಕೋಮೀಟರ್ ಮೂಲಕ ಸ್ಥಳದಲ್ಲೇ ಚೆಕ್ ಮಾಡಿದ್ರೆ ಸಂಭವಿಸುವ ಅನಾಹುತ ತಪ್ಪಿಸಬಹುದು ಅಂತ ಹೊಸ ರೂಲ್ಸ್ ತರಲು ಪಾಲಿಕೆ ಮುಂದಾಗಿದೆ. ಡ್ರಿಂಕ್ ಅಂಡ್ ಡ್ರೈವ್ ಟೆಸ್ಟ್ಗೆ ಪ್ರತ್ಯೇಕ ತಂಡವನ್ನ ಅಖಾಡಕ್ಕೆ ಇಳಿಸಲು ಬಿಬಿಎಂಪಿ ಪ್ಲಾನ್ ಮಾಡಿಕೊಂಡಿದೆ. ಇದು ಎಷ್ಟರ ಮಟ್ಟಿಗೆ ವರ್ಕೌಟ್ ಆಗುತ್ತೋ ನೋಡ್ಬೇಕು.

Share This Video


Download

  
Report form
RELATED VIDEOS