ಕಿರುತೆರೆ ನಟಿ ಚೇತನಾರಾಜ್ ಸಾವಿನ ಸುತ್ತ ಅನುಮಾನ ಮೂಡಿದೆ. ಗೀತಾ, ದೊರೆಸಾನಿ ಧಾರಾವಾಹಿಗಳ ಮೂಲಕ ಚಿರಪರಿಚಿತವಾಗಿದ್ದ ನಟಿ ಚೇತನಾರಾಜ್ ತೂಕ ಇಳಿಸೋ ಚಿಕಿತ್ಸೆಯ ಅಡ್ಡ ಪರಿಣಾಮದಿಂದ ನಿನ್ನೆ ಸಾವನ್ನಪ್ಪಿದ್ರು...ಆದ್ರೆ, ಕುಟುಂಬಸ್ಥರು ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಎಫ್‍ಎಸ್‍ಎಲ್‍ಗೆ ಚೇತನಾ ರಾಜ್‍ರ ಕೊಬ್ಬಿನಾಂಶ ಲಂಗ್ಸ್ ಟೆಸ್ಟ್‍ಗೆ ಕಳಿಸಲಾಗಿದೆ. ಎಫ್‍ಎಸ್‍ಎಲ್ ವರದಿಯಲ್ಲಿ ಸಾವಿನ ರಹಸ್ಯ ಬಯಲಾಗುವ ಸಾಧ್ಯತೆಗಳಿವೆ. ಇನ್ನೂ ಚೇತನ್ ರಾಜ್‍ಗೆ ಚಿಕಿತ್ಸೆ ಕೊಟ್ಟ ಖಾಸಗಿ ಆಸ್ಪತ್ರೆಯ ವೈದ್ಯರನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ. ಚಿಕಿತ್ಸೆಯ ಮಾಹಿತಿಯನ್ನೂ ಕೂಡ ಪಡೆದುಕೊಂಡಿದ್ದಾರೆ.
#HRRanganath #NewsCafe #PublicTV #ChetanaRaj