ರಾಜ್ಯಾದ್ಯಂತ ಶಾಲೆಗಳು ಆರಂಭವಾದ ಬೆನ್ನಲ್ಲೇ ಪೋಷಕರಿಗೆ ಬಿಗ್ ಶಾಕ್ ಎದುರಾಗಿದೆ. ಖಾಸಗಿ ಶಾಲಾ ಆಡಳಿತ ಮಂಡಳಿಗಳು 2022-23ನೇ ಸಾಲಿನ ಶಾಲಾ ಶುಲ್ಕವನ್ನು 15%ನಿಂದ 30% ವರೆಗೂ ಹೆಚ್ಚಿಸಲು ನಿರ್ಧರಿಸಿವೆ. ಕೊರೋನಾ ವೇಳೆ ಆದ ನಷ್ಟ ಸರಿದೂಗಿಸಲು ಈಗ ಪೋಷಕರ ಸುಲಿಗೆಗೆ ಮುಂದಾಗಿವೆ. ಕೊರೋನಾದಿಂದ ನಮಗೆ ಲಾಸ್ ಆಗಿದೆ. ಎಲ್ಲಾ ಬೆಲೆಗಳು ಜಾಸ್ತಿ ಆಗಿವೆ. ಅನಿವಾರ್ಯವಾಗಿ ಶುಲ್ಕ ಹೆಚ್ಚಳ ಮಾಡಬೇಕು ಅಂತ ಖಾಸಗಿ ಶಾಲೆಗಳು ಸಬೂಬು ಹೇಳ್ತಿವೆ. ಇನ್ನೂ ಕೊರೋನಾ ವೇಳೆ ಶಾಲಾ ಶುಲ್ಕದ ಬಗ್ಗೆ ಕೋರ್ಟ್ ನೀಡಿದ್ದ ಆದೇಶ 2020-21ನೇ ಸಾಲಿಗೆ ಮಾತ್ರ. ಈಗ ಯಾವುದೇ ಕಾರಣಕ್ಕೂ ಶುಲ್ಕ ಹೆಚ್ಚಳದ ನಿರ್ಧಾರ ವಾಪಸ್ ಪಡೆಯಲ್ಲ ಅಂತಲೂ ವಾದ ಮಾಡ್ತಿವೆ. ಹಾಗಾದ್ರೆ.. ಯಾವ ಶಾಲೆಗಳಲ್ಲಿ ಎಷ್ಟು ಪ್ರಮಾಣದಲ್ಲಿ ಶುಲ್ಕ ಹೆಚ್ಚಳ ಮಾಡಲಾಗಿದೆ ಅನ್ನೋದನ್ನ ನೋಡೋಣ....
#HRRanganath #NewsCafe #PublicTV