News Cafe | Supreme Court To Hear Gyanvapi Mosque Case Today | HR Ranganath | May 20, 2022
#PublicTV #NewsCafe #GyanvapiMosque
ತೀವ್ರ ಕುತೂಹಲ ಕೆರಳಿಸಿರೋ ಜ್ಞಾನವಾಪಿ ಮಸೀದಿ ವಿವಾದ ಕ್ಲೆöÊಮ್ಯಾಕ್ಸ್ ಹಂತ ತಲುಪಿದೆ. ಇವತ್ತು ಸುಪ್ರೀಂಕೋರ್ಟ್ನಲ್ಲಿ ವಿಚಾರಣೆ ನಡೆಯಲಿದೆ. ಯಥಾಸ್ಥಿತಿ ಕಾಪಾಡಲು ಆದೇಶ ನೀಡುವಂತೆ ಕೋರಿ ಮಸೀದಿ ಆಡಳಿತ ಮಂಡಳಿ ಸಲ್ಲಿಸಿರೋ ಅರ್ಜಿಯ ವಿಚಾರಣೆಯನ್ನು ಮಧ್ಯಾಹ್ನ 3 ಗಂಟೆ ಹೊತ್ತಿಗೆ ಸುಪ್ರೀಂಕೋರ್ಟ್ ಕೈಗೆತ್ತಿಕೊಳ್ಳಲಿದೆ. ಈಗಾಗಲೇ ಸರ್ವೆ ವರದಿ ವಾರಣಾಸಿ ಕೋರ್ಟ್ಗೆ ಸಲ್ಲಿಕೆಯಾಗಿದ್ದು, ಮಸೀದಿ ಇರೋ ಜಾಗದಲ್ಲಿ ಈ ಹಿಂದೆ ಶಿವಲಿಂಗ ಸೇರಿದಂತೆ, ಹಿಂದೂ ದೇವತೆಗಳ ಕುರುಹುಗಳು ಇರೋ ಬಗ್ಗೆ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಸದ್ಯಕ್ಕೆ ವಿಚಾರಣೆ ಕೈಗೊಳ್ಳದಂತೆ ವಾರಣಾಸಿ ಕೋರ್ಟ್ಗೆ ಸೂಚಿಸಿರೋ ಸುಪ್ರೀಂಕೋರ್ಟ್ ಇವತ್ತು ಮಹತ್ವದ ಆದೇಶ ನೀಡೋ ಸಾಧ್ಯತೆಗಳೂ ಇವೆ.