News Cafe | Supreme Court To Hear Plea On BBMP Election Today | HR Ranganath | May 20, 2022

Public TV 2022-05-20

Views 0

News Cafe | Supreme Court To Hear Plea On BBMP Election Today | HR Ranganath | May 20, 2022

#PublicTV #NewsCafe #HRRanganath

ಬಿಬಿಎಂಪಿ ಚುನಾವಣೆ ನಡೆಸುವಂತೆ ಹೈಕೋರ್ಟ್ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ಇಂದು ಸುಪ್ರೀಂಕೋರ್ಟ್ನಲ್ಲಿ ವಿಚಾರಣೆಗೆ ಬರಲಿದೆ. ನ್ಯಾ. ಕಾನ್ವಿಲ್ಕರ್ ನೇತೃತ್ವದ ದ್ವಿ ಸದಸ್ಯ ಪೀಠದಲ್ಲಿ ವಿಚಾರಣೆ ನಡೆಯಲಿದೆ. ಮಾಜಿ ಆಡಳಿತ ಪಕ್ಷದ ನಾಯಕರಾದ ಎಂ. ಶಿವರಾಜು ಶೀಘ್ರದಲ್ಲಿ ಚುನಾವಣೆ ನಡೆಸಲು ಕೋರಿ ಅರ್ಜಿ ಸಲ್ಲಿಸಿದ್ದರು. ತೀವ್ರ ಮಹತ್ವ ಪಡೆದುಕೊಂಡಿರುವ ಅರ್ಜಿ ವಿಚಾರಣೆ ಬಿಬಿಎಂಪಿ ಚುನಾವಣೆ ಭವಿಷ್ಯವನ್ನು ನಿರ್ಧರಿಸಲಿದೆ. ಈ ಹಿಂದೆ, ಮಧ್ಯಪ್ರದೇಶದ ಸ್ಥಳೀಯ ಸಂಸ್ಥೆ ಸೇರಿ ದೇಶದ ಎಲ್ಲ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲು, ಸುಪ್ರೀಂಕೋರ್ಟ್ ಗ್ರೀನ್ ಸಿಗ್ನಲ್ ನೀಡಿತ್ತು. ಸದ್ಯ ಬಿಬಿಎಂಪಿ ಹೈವೋಲ್ಟೇಜ್ ಎಲೆಕ್ಷನ್‌ಗೆ ಮುಹೂರ್ತ ನಿಗದಿ ಸಾಧ್ಯತೆ ಇದ್ದು.. ಎಂಪಿ ಪ್ರಕರಣದ ರೀತಿಯಲ್ಲಿ ಬಿಬಿಎಂಪಿ ವಿಚಾರದಲ್ಲಿ ಆದೇಶ ನೀಡುವ ಸಾಧ್ಯgತೆ ಇದೆ. ಆದರೆ, ವಾರ್ಡ್ ಪುನರ್ ವಿಂಗಡಣೆ, ಮೀಸಲಾತಿ ವಿಚಾರ ಮುಂದಿಟ್ಟುಕೊಂಡು ಚುನಾವಣೆ ಮುಂದೂಡಿಕೆಗೆ ರಾಜ್ಯ ಸರ್ಕಾರ ಮನವಿ ಮಾಡುವ ಸಾಧ್ಯತೆ ಕೂಡ ಇದೆ.

Share This Video


Download

  
Report form
RELATED VIDEOS