ಜಿಲ್ಲೆಯ ಜನರ ಸಂಕಷ್ಟಕ್ಕೆ ಸ್ಪಂದಿಸಲು ಜಿಲ್ಲೆಗೊಬ್ಬರು ಉಸ್ತುವಾರಿ ಸಚಿವರು, ಸಚಿವರಿಗೊಂದು ಕಚೇರಿ ಅಂತ ಮಾಡಲಾಗುತ್ತೆ. ಸಾಮಾನ್ಯವಾಗಿ ಅದೇ ಜಿಲ್ಲಾ ಸಚಿವರನ್ನು ಆಯಾ ಜಿಲ್ಲೆಗಳ ಉಸ್ತುವಾರಿಗಳಾಗಿ ಮಾಡಲಾಗ್ತಿತ್ತು. ಆದರೆ, ಈ ಬಾರಿ ಕಲಬುರಗಿಗೆ ಬಾಗಲಕೋಟೆಯ ಬೀಳಗಿಯ ಮುರುಗೇಶ್ ನಿರಾಣಿರನ್ನು ಉಸ್ತುವಾರಿಯನ್ನಾಗಿ ನೇಮಿಸಿಲಾಗಿದೆ. ಆದರೆ, ಉಸ್ತುವಾರಿ ವಹಿಸಿಕೊಂಡ ಮೇಲೆ ಜಿಲ್ಲೆ ಕಡೆ ನಿರಾಣಿ ಸಾಹೇಬ್ರು ಸುಳಿದಾಡ್ತಲೇ ಇಲ್ಲ. ನಿರಾಣಿ ಮಾತ್ರವಲ್ಲದೇ ಹಿಂದಿನ ಸರ್ಕಾರದ ಅವಧಿಯಲ್ಲಿ ಕಾರಜೋಳ ಇದ್ದಾಗಲೂ ಅಷ್ಟಕ್ಕಷ್ಟೇ ಆಗಿತ್ತು. ಹೀಗಾಗಿ, ಕಳೆದ 3 ವರ್ಷಗಳಿಂದ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿಗೆ ಬೀಗ ಬಿದ್ದಿದೆ. ನಿರ್ವಹಣೆ ಇಲ್ಲದೇ ಪಾಳು ಬಿದ್ದು ಭೂತಬಂಗಲೆಯಂತಾಗಿದೆ. ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಸಚಿವರಾಗಿದ್ದ ಪ್ರಿಯಾಂಕ್ ಖರ್ಗೆ 80 ಲಕ್ಷ ರೂಪಾಯಿ ಖರ್ಚು ಮಾಡಿ ಪೀಠೋಪಕರಣ, ಕಂಪ್ಯೂಟರ್‍ಗಳನ್ನು ತಂದಿಟ್ಟಿದ್ದು ನೀರಿನಲ್ಲಿ ಹೋಮ ಮಾಡಿದಂತಾಗಿದೆ.
#HRRanganath #NewsCafe #PublicTV