ಪುತ್ರ ವಿಜಯೇಂದ್ರಗೆ ಪರಿಷತ್ ಟಿಕೆಟ್ ಕೈ ತಪ್ಪಿದ್ದಕ್ಕೆ ಯಡಿಯೂರಪ್ಪ ಆಪ್ತರ ಬಳಿಕ ನೋವು ತೋಡಿಕೊಂಡಿದ್ದಾರೆ.. ಟಿಕೆಟ್ ಕೊಡದಿದ್ದರೆ ಹೋಗ್ಲಿ.. ಮನೆಯಲ್ಲಿದ್ದರೂ ನನ್ನ ಕರೆಯಲಿಲ್ಲ.. ಅವರೂ ಬರಲಿಲ್ಲ.. ಅಂತ ಬಿಜೆಪಿ ನಾಯಕರ ನಡೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಅಂತ ತಿಳಿದು ಬಂದಿದೆ. ಆದರೆ, ವಿಜಯೇಂದ್ರಗೆ ಟಿಕೆಟ್ ನಿರಾಕರಣೆಯ ಸಂದೇಶವನ್ನು ರಾಜ್ಯನಾಯಕರೊಬ್ಬರ ಮೂಲಕ ಹೈಕಮಾಂಡ್ ಮೊನ್ನೆಯೇ ತಿಳಿಸಿತ್ತಂತೆ. ಆದರೆ, ಗೊಂದಲದಲ್ಲಿದ್ದ ಆ ನಾಯಕರು ಹಿಂದು-ಮುಂದು ತುಳಿದು ಮೊನ್ನೆ ಸಂಜೆ ತಿಳಿಸಿದ್ರು ಅಂತ ಮಾಹಿತಿ ಲಭ್ಯವಾಗಿದೆ. ಆಗ ಯಡಿಯೂರಪ್ಪ ಮೌನಕ್ಕೆ ಶರಣಾಗಿದ್ದರಂತೆ. ಜೊತೆಗೆ ನಿನ್ನೆ ಇಡೀ ದಿನ ಏಕಾಂಗಿಯೇ ಇದ್ದ ಯಡಿಯೂರಪ್ಪ, ಕುದಿ ಮೌನದಲ್ಲೇ ದಿನ ಕಳೆದಿದ್ದಾರೆ ಅಂತ ಗೊತ್ತಾಗಿದೆ. ಹಾಗಾದ್ರೆ ಯಡಿಯೂರಪ್ಪಗೆ ಆಹ್ವಾನ ನೀಡದಿರೋದು ಪುತ್ರನಿಗೆ ಟಿಕೆಟ್ ಕೊಡಲಿಲ್ಲ ಎಂಬ ಭಯದಿಂದಲೋ..? ಯಡಿಯೂರಪ್ಪ ಕರೆಯದೇ ನಾಮಪತ್ರ ಸಲ್ಲಿಕೆ ಮಾಡಬೇಕು ಎಂಬ ತೀರ್ಮಾನವೋ..? ಎಂಬ ಬಗ್ಗೆ ಚರ್ಚೆ ಜೋರಾಗಿದೆ.
#HRRanganath #NewsCafe #PublicTV