ರಾಜ್ಯದ ಕರಾವಳಿಯಲ್ಲಿ ಆರಂಭಗೊಂಡಿದ್ದ ಹಿಜಬ್ ವಿವಾದ ಇದೀಗ ಮತ್ತೆ ಮುನ್ನಲೆಗೆ ಬಂದಿದೆ. ಮಂಗಳೂರಿನ ಹಂಪನಕಟ್ಟೆಯಲ್ಲಿರೋ ಯೂನಿವರ್ಸಿಟಿ ಕಾಲೇಜಿನ ವಿದ್ಯಾರ್ಥಿನಿಯರು ಹಿಜಬ್ ಧರಿಸಿ ತರಗತಿಗೆ ಬಂದಿರೋದು ನಿನ್ನೆ ವಿವಾದ ಆಗಿತ್ತು. ಹೀಗಾಗಿ ಇಂದಿನಿಂದ ಸಮವಸ್ತ್ರದೊಂದಿಗೆ ಬಂದವರಿಗೆ ಮಾತ್ರ ಪ್ರವೇಶ ಎಂದು ಆಡಳಿತ ಮಂಡಳಿ ಹೇಳಿದೆ. ಜೊತೆಗೆ, ಇಂದಿನಿಂದ ತರಗತಿ ಮಾತ್ರವಲ್ಲ ಕ್ಯಾಂಪಸ್‍ನೊಳಗೂ ಹಿಜಬ್ ಧರಿಸದಂತೆ ನೋಟೀಸ್ ಜಾರಿಗೊಳಿಸಿದೆ. ಆದರೆ, ವಿದ್ಯಾರ್ಥಿನಿಯರು ಮಾತ್ರ ಹಿಜಬ್ ನಮ್ಮ ಹಕ್ಕು ಎಂದು ಪಟ್ಟು ಹಿಡಿದಿದ್ದಾರೆ. ಇನ್ನು, ಹಿಜಬ್‍ಗೆ ಅವಕಾಶ ಕೊಟ್ಟರೆ ನಮಗೂ ಕೇಸರಿ ಶಾಲು ಧರಿಸಲು ಅವಕಾಶ ಕೊಡಿ ಅಂತ ಹಿಂದೂ ವಿದ್ಯಾರ್ಥಿನಿಯರು ಕೂಡ ಆಗ್ರಹಿಸಿದ್ದಾರೆ. ಈ ನಡುವೆ, ಸ್ಥಳೀಯ ಶಾಸಕ ವೇದವ್ಯಾಸ ಕಾಮತ್ ನೇತೃತ್ವದಲ್ಲಿ ಇಂದು ಸಭೆ ನಡೆಯಲಿದೆ. ಈ ಸಭೆಯಲ್ಲಿ ಯಾವ ನಿರ್ಧಾರ ಕೈಗೊಳ್ಳುತ್ತಾರೋ ಅದು ಅಂತಿಮವಾಗಲಿದೆ. ಈ ಮಧ್ಯೆ, ಕೋರ್ಟ್ ಆದೇಶವನ್ನು ಪಾಲಿಸಲಿ ಅಂತ ಉಡುಪಿ ಶಾಸಕ ರಘುಪತಿ ಆಗ್ರಹಿಸಿದ್ದಾರೆ.
#HRRanganath #NewsCafe #PublicTV #HijabRow