ಪಾಕಿಸ್ತಾನದಲ್ಲಿ ಪೆಟ್ರೋಲ್, ಡೀಸೆಲ್ ದರಗಳನ್ನು ಏಕಾಏಕಿ 30 ರೂಪಾಯಿಯಷ್ಟು ಹೆಚ್ಚಿಸಲಾಗಿದೆ. ಪೆಟ್ರೋಲ್ 180, ಡೀಸೆಲ್ 175 ರೂಪಾಯಿ ಆಗಿದೆ. ಇದಕ್ಕೆ ಅಲ್ಲಿನ ಸರ್ಕಾರದ ವಿರುದ್ಧ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಗರಂ ಆಗಿದ್ದಾರೆ. ನಮ್ಮ ಸರ್ಕಾರ ಇದ್ದಾಗ ರಷ್ಯಾದಿಂದ ರಿಯಾಯ್ತಿ ದರದಲ್ಲಿ ತೈಲ ಖರೀದಿಗೆ ನೋಡಿದ್ವಿ. ಆದ್ರೇ, ಈ ಪ್ರಯತ್ನಗಳನ್ನು ಈಗಿನ ಸರ್ಕಾರ ಮುಂದುವರೆಸಲಿಲ್ಲ. ಆದ್ರೆ, ಭಾರತ ನೋಡಿ ಕಲಿತುಕೊಳ್ಳಿ.. ಅಮೆರಿಕಾ ಜೊತೆ ಇದ್ದುಕೊಂಡು ರಷ್ಯಾದಿಂದ ರಿಯಾಯ್ತಿ ದರದಲ್ಲಿ ಕಚ್ಚಾತೈಲ ಖರೀದಿ ಮಾಡಿದೆ. ಅಲ್ಲದೇ, ಭಾರತದಲ್ಲಿ ತೈಲ ದರ ಕಡಿಮೆ ಮಾಡಲಾಗಿದೆ. ಆದ್ರೆ, ಪಾಕಿಸ್ತಾನದಲ್ಲಿ ಇದಕ್ಕೆ ವಿರುದ್ಧವಾಗಿ ಎಲ್ಲಾ ನಡೀತಿದೆ ಹಣದುಬ್ಬರ ಬೇರೆ ಹೆಚ್ಚಿದೆ.. ಎಂದು ಟೀಕಿಸಿದ್ದಾರೆ.
#HRRanganath #NewsCafe #PublicTV #Pakistan