Diesel Goes Out Of Stock In Several Places Of Karnatka; Petrol Bunk Owners To Protest Tomorrow

Public TV 2022-05-30

Views 36

ಬೇಸಿಗೆಯಲ್ಲಿ ಕುಡಿಯುವ ನೀರಿಗಾಗಿ ಕ್ಯೂ ನಿಲ್ಲೋದು ಕಾಮನ್. ಆದರೆ ಈಗ ಡೀಸೆಲ್‌ಗಾಗಿ ಕ್ಯೂ ನಿಲ್ಲೋ ಹಾಗಾಗಿದೆ. ಯಸ್.... ರಾಜ್ಯದ ಹಲವೆಡೆ ಡೀಸೆಲ್ ಕೊರತೆ ಎದುರಾಗಿದ್ಯಾ ಅನ್ನೋ ಅನುಮಾನ ಮೂಡಿದೆ. ಜನ ಡೀಸೆಲ್‌ಗೆ ಮುಗಿಬೀಳ್ತಿದ್ದಾರೆ.

ಹಾವೇರಿಯ ಬ್ಯಾಡಗಿ ತಾಲ್ಲೂಕಿನ ಮೊಟೇಬೆನ್ನೂರು ಗ್ರಾಮದಲ್ಲಿ ಡೀಸೆಲ್ ಸಿಗದೆ ಜನ ಬಂಕ್‌ನಿಂದ ಬಂಕ್‌ಗೆ ಓಡಾಡುತ್ತಿದ್ದಾರೆ. ಜಿಲ್ಲೆಯ ಬಹುತೇಕ ಬಂಕ್‌ನಲ್ಲಿ ನೋ ಸ್ಟಾಕ್ ಬೋರ್ಡ್ ಸಾಮಾನ್ಯವಾಗಿದೆ. ಹಾಗಾಗಿ ಬಂಕ್‌ಗಳಲ್ಲಿ ಕ್ಯಾನ್‌ಗಳನ್ನ ಇಟ್ಟುಕೊಂಡು ಡೀಸೆಲ್‌ಗಾಗಿ ಕಾಯ್ತಿದ್ದಾರೆ.

ಇನ್ನು ಹಾವೇರಿಯಲ್ಲಿ ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗುತ್ತದೆ ಅಂತಾ ಟ್ರಾö್ಯಕ್ಟರ್ ಚಾಲಕರು, ಅನ್ನದಾತರು ಡೀಸೆಲ್ ಸಿಗದ್ದಕ್ಕೆ ಪ್ರತಿಭಟನೆ ಕೂಡ ನಡೆಸಿದ್ರು.

ಇನ್ನು ಪೆಟ್ರೋಲ್ ಬಂಕ್‌ಗಳ ಮುಷ್ಕರಕ್ಕೆ ಕರೆ ನೀಡಿರುವ ಬಗ್ಗೆ ಸುದ್ದಿ ಹಬ್ಬಿರುವ ಪರಿಣಾಮ ಹುಬ್ಬಳ್ಳಿ ನಗರದ ಪೆಟ್ರೋಲ್ ಬಂಕ್‌ಗಳು ಫುಲ್ ರಷ್ ಆಗಿತ್ತು. ಡೀಸೆಲ್ ಮತ್ತು ಪೆಟ್ರೋಲ್ ಹಾಕಿಸಿಕೊಳ್ಳಲು ವಾಹನ ಸವಾರರು ಸಾಲುಗಟ್ಟಿ ನಿಂತಿದ್ರು.

ಇನ್ನು ನಾಳೆ ದೇಶಾದ್ಯಂತ ಪೆಟ್ರೋಲ್ ಬಂಕ್ ಮಾಲೀಕರ ಮುಷ್ಕರ ಹಿನ್ನೆಲೆ ಹಾಸನ ಜಿಲ್ಲೆಯಲ್ಲಿಯೂ ಪ್ರತಿಭಟನೆ ನಡೆಯಲಿದೆ. ಈ ಬಗ್ಗೆ ಮಾತನಾಡಿದ ಜಿಲ್ಲಾ ಪೆಟ್ರೊಲಿಯಂ ಡೀಲರ್ಸ್ ಅಸೋಸಿಯೇಷನ್ ಅಧ್ಯಕ್ಷ ಗಿರೀಶ್ ಅಡವಿಗೌಡ, ಕನಿಷ್ಠ ೫% ಪರ್ಸೆಂಟ್ ಕಮಿಷನ್ ಹೆಚ್ಚಿಸಬೇಕು. ಇಲ್ಲಿಯವರೆಗೂ ಆಗಿರುವ ನಷ್ಟವನ್ನು ಸರ್ಕಾರ ಭರಿಸಬೇಕು ಅಂತಾ ಆಗ್ರಹಿಸಿದ್ದಾರೆ.

ಕಳೆದ ನಾಲ್ಕೆöÊದು ದಿನಗಳ ಹಿಂದೆ ಡೀಸೆಲ್, ಪೆಟ್ರೋಲ್ ದರ ಕಡಿಮೆಯಾಗಿದೆ. ಆದರೆ ಈಗ ಡೀಸೆಲ್ ಸಿಗ್ತಿಲ್ಲ. ಇದು ಅನ್ನದಾತರು, ವಾಹನ ಸವಾರರ ಆಕ್ರೋಶಕ್ಕೆ ಕಾರಣವಾಗಿದೆ.


Diesel Goes Out Of Stock In Several Places Of Karnatka; Petrol Bunk Owners To Protest Tomorrow

#publictv #diesel #Petrol

Watch Live Streaming On http://www.publictv.in/live

Share This Video


Download

  
Report form
RELATED VIDEOS