ದಿನ ಬೆಳಗಾದ್ರೆ ಸಾಕು ಒಂದ್ಕಡೆ ಆಡಳಿತ ಪಕ್ಷಗಳು.. ಮತ್ತೊಂದು ಕಡೆ ವಿಪಕ್ಷಗಳು ಹಿಜಬ್, ಮೈಕ್, ಧರ್ಮ ದಂಗಲ್.. ಈಗ ಚಡ್ಡಿ ವಾರ್, ಪಠ್ಯ ಪುಸ್ತಕ ಪರಿಷ್ಕರಣೆ ಫೈಟ್ ಅಂತ ಜಪಾಪಟಿಗೆ ಇಳೀತಾರೆ. ಆದ್ರೆ, ಕರ್ನಾಟಕದ ಜೀವನಾಡಿ ರಾಜಧಾನಿ ಬೆಂಗಳೂರನ್ನೇ ಮರೆತುಬಿಟ್ಟಿದ್ದಾರೆ. ಸಿಎಂ ಬೊಮ್ಮಾಯಿ ಸೇರಿದಂತೆ ಜವಾಬ್ದಾರಿಯುತ ಸ್ಥಾನದಲ್ಲಿರುವ ರಾಜಕೀಯ ನಾಯಕರು ಬೆಂಗಳೂರು ನಗರದ ಅಭಿವೃದ್ಧಿ ಕಡೆ ಗಮನ ಹರಿಸಿದೆ ಅನಾಥ ಮಾಡಿದ್ದಾರೆ. ಚಡ್ಡಿಗೆ ಸಿಕ್ಕಷ್ಟು ಪ್ರಾಮುಖ್ಯತೆ ಕೂಡ ವಿಶ್ವಪ್ರಸಿದ್ಧಿ ಬೆಂಗಳೂರಿಗೆ ಇಲ್ಲದಂತಾಗಿದೆ. ಪರಿಣಾಮ ಎಲ್ಲೆಲ್ಲೂ ಸಮಸ್ಯೆಗಳ ಸರಮಾಲೆ. ನಿತ್ಯ ಸಾವಿರಾರು ಜನ ಓಡಾಡೋ.. ಕೆಂಗೇರಿಯ ರೋಡ್ ವಿಡಿಯೋ ಮಾತ್ರ ವೈರಲ್ ಆಗಿದೆ. ಉಳಿದಂತೆ ಉದ್ಯಾನ ನಗರಿಯ ಶೇ.60ರಷ್ಟು ರಸ್ತೆಗಳು ಗುಂಡಿಗಳಿಂದಲೇ ತುಂಬಿವೆ. ಅಪಘಾತ ಪ್ರಕರಣಗಳು ಹೆಚ್ಚಾಗ್ತಿವೆ. ಸರ್ಕಾರ 4 ವರ್ಷದಲ್ಲಿ ರಸ್ತೆಗುಂಡಿಗೆ ಅಂತ 168.2 ಕೋಟಿ ಸುರಿದಿದ್ದೇವೆ ಅಂತ ಲೆಕ್ಕ ಹೇಳ್ತಿದೆ. ಆದರೆ, ಇದು ನಿಜವಾಗಿಯೂ ರಸ್ತೆ ಗುಂಡಿಗೆ ಹೋಯ್ತಾ.. ಗುತ್ತಿಗೆ-ಅಧಿಕಾರಿಗಳು-ಜನಪ್ರತಿನಿಧಿಗಳ ಜೇಬಿಗೆ ಹೋಯ್ತಾ.. ಗೊತ್ತಿಲ್ಲ. ಜನ ಸಾಮಾನ್ಯರ ಶಾಪ, ಹೈಕೋರ್ಟ್ ಛೀಮಾರಿ.. ಉಗಿದು ಉಪ್ಪಾಕಿದ್ರೂ ಮೈಗೂಡಿಸಿಕೊಂಡು ಬಿಟ್ಟಿದ್ದಾರೆ. ಕಾರ್ಪೊರೇಟರ್‍ಗಳನ್ನ ಕೇಳೋಣ ಅಂದರೆ ಎಲೆಕ್ಷನ್ ನಡೆದಿಲ್ಲ. ಉಸ್ತುವಾರಿ ಕೇಳೋಣ ಅಂದ್ರೆ ಸಿಎಂ ಕೈಗೆ ಸಿಕ್ಕಲ್ಲ. ಬೆಂಗಳೂರು ಸಚಿವರನ್ನು ಪ್ರಶ್ನಿಸಿದ್ರೆ.. ಎಲ್ಲಾ ಮಾಡ್ತಿದ್ದೇವೆ ಅಂತ ಅದೇ ಹಳೇ ಡಿವಿಡಿ ರಿಪ್ಲೇ ಮಾಡ್ತಾರೆ. ಅಂದಹಾಗೆ, ಜನ ಸಾಮಾನ್ಯರು ಓಡಾಡೋ ರಸ್ತೆ ಮಾತ್ರ ಅಧ್ವಾನ ಆಗಿರೋದಾ...? ಸಿಎಂ-ಸಚಿವರ ಮನೆ ಮುಂದೆನೂ ಇದೇ ರೀತಿ ಇದ್ಯಾ ಅಂದರೆ.. ಖಂಡಿತಾ ಇಲ್ಲ. ಮುಖ್ಯಮಂತ್ರಿ ಆದಿಯಾಗಿ ಎಲ್ಲಾ ಸಚಿವರ ಮನೆ ಮುಂದೆ ಲಕಲಕ ಅಂತ ನೈಸಾಗಿರೋ ಹೈಕ್ಲಾಸ್ ರೋಡೇ ಇರೋದು.. ಎಸಿ ಕಾರ್‍ನಲ್ಲಿ ಅವರೆಲ್ಲಾ ಝಮ್ ಅಂತ ಓಡಾಡ್ತಿದ್ದಾರೆ. ತೋರಿಸ್ತೀವಿ..
#publictv #hrranganath #newscafe