ಮೈಸೂರಲ್ಲಿ ಹಾಳಾಗಿರುವ ಪೊಲೀಸ್ ಚೌಕಿ..! | Mysuru | Public TV

Public TV 2022-06-12

Views 5

ಮೈಸೂರಿನಲ್ಲಿ ಅಂದಾಜು 100ಕ್ಕೂ ಹೆಚ್ಚು ಪೊಲೀಸ್ ಚೌಕಿಗಳಿವೆ. ಎಲ್ಲಾ ವೃತ್ತದಲ್ಲಿರುವ ಪೊಲೀಸ್ ಚೌಕಿಗಳು ಶಿಥಿಲಗೊಂಡಿವೆ. ಚೌಕಿಗಳಲ್ಲಿ ಒಬ್ಬರಷ್ಟೇ ಕುಳಿತುಕೊಳ್ಳಲು ಸಾಧ್ಯ. ಬಿರುಗಾಳಿ ಮಳೆ ತಡೆಯದ ಈ ಕಬ್ಬಿಣ ಚೌಕಿಗಳ ಬಾಗಿಲುಗಳು ಹಾಗೂ ಮೇಲ್ಬಾಗದ ಶೀಟ್‍ಗಳು ಸಂಪೂರ್ಣವಾಗಿ ಕಿತ್ತು ಬಂದಿದೆ. ವಾಹನ ದಟ್ಟಣೆಯ ರಾಮಸ್ವಾಮಿ ವೃತ್ತ, ಚಾಮರಾಜ ಜೋಡಿ ರಸ್ತೆ, ಜೆಎಲ್ ಬಿ ರಸ್ತೆ, ನ್ಯೂ ಕಾಂತರಾಜ ಅರಸು ರಸ್ತೆ, ಹುಣಸೂರು ರಸ್ತೆ ಸೇರಿದಂತೆ ಹಲವಡೆ ಇರುವ ಚೌಕಿಗಳಿಗೆ ಆಕಾಶವೇ ಸೂರಾಗಿದೆ. ಮಳೆ ಬಂದರೆ ಪೊಲೀಸರ ಸಂಕಷ್ಟ ಹೇಳತೀರದ್ದಾಗಿದೆ. ದಿನವಿಡೀ ನಿಂತು ಕರ್ತವ್ಯ ನಿರ್ವಹಿಸುವುದೇ ಕಷ್ಟವಾಗಿದೆ. ಬಿಸಿಲು ಮಳೆಯಲ್ಲದೆ ವಾಹನಗಳ ದಟ್ಟಹೊಗೆ, ಶಬ್ದ ಮಾಲಿನ್ಯಗಳಿಂದ ಸಿಬ್ಬಂದಿ ರಕ್ಷಿಸಲು ಬೆಂಗಳೂರಿನಲ್ಲಿ ಇರುವಂತೆ ಹವಾ ನಿಯಂತ್ರಿತ ಹೈಟೆಕ್ ಚೌಕಿಗಳನ್ನ ಮೈಸೂರಿನಲ್ಲೂ ನಿರ್ಮಿಸಿದರೆ ಸಂಚಾರ ಪೊಲೀಸರಿಗೆ ಅನುಕೂಲವಾಗಲಿದೆ. ಅಧಿಕಾರಿಗಳು ಮಾತ್ರ ಎಸಿ ರೂಂ ನಲ್ಲಿ ಕೆಲಸ ಮಾಡ್ತಾರೆ. ಪೊಲೀಸ್ ಪೇದೆಗಳು ರಸ್ತೆಯಲ್ಲಿ ಬೆಳಗ್ಗೆಯಿಂದ ರಾತ್ರಿಯವರೆಗೆ ನಿಂತು ಕೆಲಸ ಮಾಡಬೇಕಾಗಿದೆ. ಕೂಡಲೇ ಸಂಚಾರಿ ಹಿರಿಯ ಪೊಲೀಸ್ ಅಧಿಕಾರಿಗಳು ಎಚ್ಚೆತ್ತುಕೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

#publictv #mysuru

Share This Video


Download

  
Report form
RELATED VIDEOS