ವಿಧಾನಸಭೆ ಚುನಾವಣೆ ಹತ್ತಿರ ಬರ್ತಿದ್ದಂತೆ ಬಿಜೆಪಿ ಹೈಕಮಾಂಡ್‍ಗೆ ಟೆನ್ಷನ್ ಶುರುವಾಗಿದೆ. ಕಳೆದ ಚುನಾವಣೆಗೂ ಮುನ್ನ ಬಿಜೆಪಿ ನೀಡಿದ್ದ ಪ್ರಣಾಳಿಕೆ ನೆನಪು ಮಾಡಿಕೊಂಡಿರೋ ಹೈಕಮಾಂಡ್ ಈಗ ಸಿಎಂಗೆ ಅದರ ಅನುಷ್ಠಾನದ ವರದಿ ಕೇಳಿದೆ. ಪಕ್ಷದ ಪ್ರಣಾಳಿಕೆಯಲ್ಲಿ ಎಷ್ಟು ಅನುಷ್ಠಾನ ಆಗಿದೆ..? ಎಷ್ಟು ಆಗಿಲ್ಲ ಎಂಬ ವರದಿ ಕೇಳಿದೆ. ಇದು ಚುನಾವಣಾ ವರ್ಷವಾಗಿರುವ ಹಿನ್ನೆಲೆಯಲ್ಲಿ ಜುಲೈ ಬಳಿಕ ಪ್ರಣಾಳಿಕೆಯಲ್ಲಿ ಬಾಕಿ ಭರವಸೆಗಳ ಜಾರಿಗೆ ಹೈಕಮಾಂಡ್ ಸರ್ಕಾರಕ್ಕೆ ವಿಶೇಷ ಟಾಸ್ಕ್ ಕೊಡುವ ಸಾಧ್ಯತೆ ಇದೆ ಎನ್ನಲಾಗ್ತಿದೆ. 2018ರ ಮೇ 4ರಂದು ಸಿಎಂ ಅಭ್ಯರ್ಥಿ ಆಗಿದ್ದ ಮಾಜಿ ಸಿಎಂ ಯಡಿಯೂರಪ್ಪನವರು "ನಮ್ಮ ಕರ್ನಾಟಕಕ್ಕೆ ನಮ್ಮ ವಚನ" ಎಂಬ ಹೆಸರಿನಲ್ಲಿ ಬಿಜೆಪಿ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿದ್ರು.
#publictv #newscafe #hrranganath