ವಿಜಯಪುರದಲ್ಲಿ ಇನ್ಸೂರೆನ್ಸ್ ಕಂಪೆನಿಯಿಂದ ದೋಖಾ | Vijayapura | Public TV

Public TV 2022-06-17

Views 7

ವಿಜಯಪುರ ನಗರದ ಗುರುಕುಲ ರಸ್ತೆಯಲ್ಲಿರುವ ನ್ಯೂ ಇಂಡಿಯಾ ಅಶ್ಯೂರನ್ಸ್ ಕಂಪನಿಯಿಂದ ಗ್ರಾಹಕರಿಗೆ ದೋಖಾ ಆಗಿದೆ ಎಂಬ ಆರೋಪ ಕೇಳಿಬಂದಿದೆ. ಇಲ್ಲಿ ಇನ್ಸುರೆನ್ಸ್ ಮಾಡಿಸಲು ಹಣ ಪಾವತಿ ಮಾಡಿದ್ದರೂ ಸಹ ಆನ್‍ಲೈನ್‍ನಲ್ಲಿ ಹಣ ಭರಿಸಿಲ್ಲ. ಇನ್ಸುರೆನ್ಸ್ ಡ್ಯೂ ಅಥವಾ ಎಕ್ಸಪೈರ್ ಎಂದು ಬರುತ್ತಿದೆ. ಇಲ್ಲಿಗೆ ಬಂದ ಹಲವಾರು ವಾಹನಗಳ ಮಾಲೀಕರು ತಮ್ಮ ವಾಹನಗಳ ವಿಮೆಗಾಗಿ ಇಲ್ಲಿ ಹಣವನ್ನು ಭರಿಸಿ, ರಸೀದಿ ಹಾಗೂ ಇನ್ಸುರೆನ್ಸ್ ಕಾಪಿಯನ್ನೂ ಪಡೆದಿದ್ದಾರೆ. ನಂತರ ಆನ್ ಲೈನ್‍ನಲ್ಲಿ ವಿಮೆ ಜಾರಿಯಲ್ಲಿದೆ ಎಂದು ಆರಂಭದಲ್ಲಿ ತೋರಿಸಿದೆ. ಆದ್ರೆ ಅಸಲಿಗೆ ಆನ್‍ಲೈನ್‍ನಲ್ಲಿ ಅಪ್‍ಡೇಟ್ ಆಗಿಲ್ಲ. ವಿಜಯಪುರ ತಾಲೂಕಿನ ಹಿಟ್ಟಿನಹಳ್ಳಿ ಗ್ರಾಮದ ಶ್ರೀಶೈಲ ಗೆಣ್ಣೂರ ತಮ್ಮ ಕ್ರೂಸರ್ ವಾಹನದ ವಿಮೆಗಾಗಿ ಇದೇ ನ್ಯೂ ಇಂಡಿಯಾ ಅಶ್ಯೂರೆನ್ಸ್ ನಲ್ಲಿ ಒಂದು ವರ್ಷದ ವಿಮೆಗಾಗಿ 13,055 ರೂಪಾಯಿ ಭರಿಸಿ ಅದಕ್ಕೆ ಸಂಬಂಧಿಸಿದ ರಸೀದಿಯನ್ನೂ ಪಡೆದಿದ್ರೂ.. ಬಳಿಕ ಕ್ರೂಸರ್‍ನಲ್ಲಿ ಮಹಾರಾಷ್ಟ್ರಕ್ಕೆ ಹೋದಾಗ ಅಲ್ಲಿನ ಪೆÇಲೀಸರು ವಾಹನದ ದಾಖಲಾತಿ ಪರಿಶೀಲನೆ ಮಾಡೋ ವೇಳೆ ಆನ್‍ಲೈನ್‍ನಲ್ಲಿ ಕ್ರೂಸರ್ ವಿಮೆ ಎಕ್ಸ್‍ಪೈರ್ ಎಂದು ತೋರಿಸಿದೆ. ಇದಕ್ಕಾಗಿ ದಂಡವನ್ನು ಕಟ್ಟಿದ್ದಾರೆ. ಈ ಬಗ್ಗೆ ನ್ಯೂ ಇಂಡಿಯಾ ಅಶ್ಯೂರನ್ಸ್ ಕಚೇರಿಯಲ್ಲಿ ವಿಚಾರಿಸಿದಾಗ ಕಂಪನಿ ಖಾತೆಗೆ ಇನ್ಸುರನ್ಸ್ ಹಣ ಸಂದಾಯವಾಗಿಲ್ಲ. ಏಜೆಂಟರ್ ಬಳಿ ಕೊಟ್ಟಿದ್ದೀರಿ ಅವರನ್ನೇ ಕೇಳಿ ಅಂತ ಕಚೇರಿ ಮ್ಯಾನೇಜರ್ ಹೇಳಿದ್ದಾರೆ.

#publictv #vijayapura #insurance

Share This Video


Download

  
Report form
RELATED VIDEOS